top of page

ಅಮ್ಮನ ಅಮೃತನುಡಿ

  • Abhiram Ramnarayan Aithal
  • Aug 31, 2022
  • 1 min read

ಕಂದಾ....ಚಿನ್ನಾ....

ಚಂದಾಮಾಮನ ನೋಡುತ ನೀ ಮಲಗು

ಅವನ ಹಾಗೆ ಪ್ರಕಾಶ ನೀಡುವಂತವನಾಗು

ತಾರೆಯ ಹಾಗೆ ಮಿನುಗು

ಪ್ರೀತಿಯ ಹಂಚುವಂತವನಾಗು ..


ಅಸಂಖ್ಯಾತ ನಕ್ಷತ್ರಗಳ ಪ್ರೀತಿ ಪಾತ್ರನಾಗು

ನಿನ್ನ ಜೀವನಕೆ ನೀನೆ ಯಜಮಾನನಾಗು

ಬಡವರ ಪಾಲಿಗೆ ದಾನಶೂರನಾಗು

ಕಷ್ಟದಲ್ಲಿದ್ದವರಿಗೆ ಕರುಣಾಮಯಿಯಾಗು ..


ಸತ್ಯದ ಕಡೆಗೆ ನಿಲ್ಲುವಂತವನಾಗು

ಪ್ರಾಮಾಣಿಕತೆಯಿಂದ ಬದುಕುವಂತವನಾಗು

ಸರಿದಾರಿಯ ತೋರುವವನಾಗು

ಕೊನೆಗೆ ಈ ವೃದ್ಧ ಜೀವಿಗಳಿಗೆ ಬೆಳಕಾಗು ..


Comments


  • Instagram

Follow us on Instagram

LitSoc DSI

bottom of page