top of page
Prashanth Ganapathi Bhat

ತ್ರಿಪುರಾಸುರ ಸಂಹಾರಕ

ಶಿವ ಎಂದರೆ ಮಂಗಳ ಸ್ವರೂಪ ,ಎಂದು ಅರ್ಥ ಇದೆ..ಸದಾ ಧ್ಯಾನ ಸ್ವರೂಪಿ ಅವನು ,ಜಗತ್ತಿನ ಲಯಕಾರಕನು! ಆದರೂ ಯಾವುದೇ ಅಹಂ ಇಲ್ಲ ,ಇರುವವರ ಅಹಂ ಅನ್ನು ನಾಶ ಮಾಡುತ್ತಾ ಈ ಜಗತ್ ರಕ್ಷಕ ಕುಳಿತಿರುವನು!.

ಸಾಕ್ಷಾತ್ ಜಗನ್ಮಾತೆ ಆದಂತಹ,ಜಗತ್ತಿಗೆ ಅನ್ನ ನೀಡುವ ತಾಯಿ ಅನ್ನಪೂರ್ಣೇಶ್ವರಿ ಮಾತೆಯೇ ಅವನ ಅರ್ಧಾಂಗಿ ಆದರೂ ಭಿಕ್ಷಾಟನೆ ಮಾಡಿ ಅನ್ನ ಸ್ವೀಕಾರ ಮಾಡುವಂತಹ ಘನ ವ್ಯಕ್ತಿತ್ವ ಆ ಪರಮಾತ್ಮನದು.ಅತ್ಯಂತ ಪರಮ ಪಾವನ ನದಿಯಾದ ಗಂಗೆಯೇ ಈತನ ತಲೆಯ ಮೇಲೆ ನೆಲೆಸಿರುವಳು.ಆದರೆ ಈ ಪುರುಷನೋ ಸತ್ತ ಹೆಣಗಳನ್ನು ಸುಡುವ ಸ್ಮಶಾನ ವಾಸಿ.ಜಗತ್ತಿಗೆ ತಂಪನ್ನು ಕೊಡುವ ಚಂದ್ರನನ್ನು ಮುಡಿಯಲ್ಲಿ ಧರಿಸಿರುವ ಚಂದ್ರ ಮೌಳೇಶ್ವರ ಇವನು ಬಿಸಿಯಾದ ಭಸ್ಮವನ್ನು ದೇಹಕ್ಕೆ ಬಳಿದು ಕೊಳ್ಳುವನು! ಎರಡು ಕಣ್ಣುಗಳು ಸದಾ ಶಿಷ್ಟರ ರಕ್ಷಣೆಗೆ,ಇನ್ನೊಂದು ಕಣ್ಣೋ! ಸದಾ ಮುಚ್ಚಿರುವುದು..ಬಿಟ್ಟರೆ ದುಷ್ಟರ ರಕ್ಷಣೆ ಮಾಡಿಯೇ ತೀರ ಅವನು..ಕೊರಳಲ್ಲಿ ಸರ್ಪ ಧರಿಸಿರುವವ ಇವ, ಆದರೂ ಯಾವುದೇ ಭೀತಿಯಿಲ್ಲ...ಕಂಠದಲ್ಲಿ ವಿಷ ಧರಿಸಿರುವ ನೀಲಕಂಠ ಇವನು, ಜಗತನ್ನೋ ನಿಲ್ಲಿಸಬಲ್ಲ ಪರಮೇಶ್ವರ. ಚಂದ್ರನಿರುವನು ಎಂಬ ಹೆಮ್ಮೆ ಇಲ್ಲ ನಾಗನಿರುವನೆಂಬ ಭಯಭೀತಿ ಇಲ್ಲ , ಇವನ ಆಯುಧವೋ ತ್ರಿಶೂಲ,ಸತ್ವ ರಜ ತಮಸ್ಸುಗಳ ಪ್ರತೀಕ,ಅದಲ್ಲದೇ ಮೂರನ್ನು ಹತೋಟಿಯಲ್ಲಿಟ್ಟಿರುವ ಮಹಾ ಮನಸ್ಸನ್ನೇ ಗೆದ್ದ ಈಶ್ವರ. ಇವೆಲ್ಲದರ ನಡುವೆ ಅವನು ಸದಾ ಅಂತರ್ಮುಖಿ, ಅತ್ಮಚಿಂತನೆ ಅಲೆ ತೊಡಗಿರುವವನು. ಆಹಾ ಪರಶಿವನೇ, ತ್ರಿಪುರಾಸುರ ಸಂಹಾರಕನೇ, ರಾವಣದರ್ಪ ವಿನಾಶಕನೇ, ಪರಮ ಆತ್ಮ ಲಿಂಗನೇ ನಿನಗೆ ನಮೋನ್ನಮಃ🙏🏻

- ಬ್ರಹ್ಮಪುರಿಯ ಭಿಕ್ಷುಕ

Tags:

7 views

コメント


bottom of page