top of page
  • Nivya Nair

ಜೀವಿಸುವುದರಲ್ಲಿ ವ್ಯಸ್ತಳಾಗಿದ್ದೆ

ಪ್ರತಿದಿನ ಎಂತದಾದರೂ ಪಡೆದುಕೊಳ್ಳುವ ಹುಡುಕಾಟದಲ್ಲಿ

ನಾನಿಂದು ನನ್ನನ್ನೇ ಹುಡುಕುತಿರುವೆ

ಸೂರ್ಯನ ಆ ಕಿರಣಗಳ ಹಿಂಬಾಲಿಸಿ ಹೋಗುವದಾರಿಯಲ್ಲಿ

ಮನೆಯಲ್ಲಿದ್ದ ಆ ಮಿನುಗು ತಾರೆಗಳನ್ನೇ ನಾ ಕಳೆದುಕೊಂಡಿರುವೆ

ಸ್ವಾವಲಂಭಿಯಾಗೆ ಜೀವನ ಸಾಗಿಸುವ ಹಠದಲ್ಲಿ

ಚಟಗಳಿಗೆ ಗುಲಾಮಳಾಗಿ ಚಟಗಳನ್ನೇ ಬೆಳೆಸುತ್ತಿರುವೆ

ನೀನು......ಆ ನೀನೇ...

ಇದೆಲ್ಲವನ್ನು ಬದಲಿಸಲು ನಿನ್ನಿಂದ ಸಾಧ್ಯವೇ ??

ರಾತ್ರಿ ಕಣ್ಮುಚ್ಚಿದೊಡನೆ ಮಲಗದಿರದ ನೀನು

ಮತ್ತೆ ಆ ಸೂರ್ಯ ಎದ್ದುಬರುವಷ್ಟರಲ್ಲಿ ಯೋಚಿಸು

ಆ ಪುಟ್ಟ ಮಗುವಿನ ಆಸೆ ಏನಾಗಿತ್ತು ಎಂದು

ಮುದ್ದು ಮುದ್ದಾಗಿ ಆ ಮಗು ಏನು ಮಾತನಾಡುತಿತ್ತೆಂದು

ಬೆಳಗಾದರೆ ಸಾಕು ಪಕ್ಕದ ಮನೆಯ ಹುಡುಗನೊಂದಿಗೆ

ಮಹಡಿಯ ಮೇಲೆ ಹೋಗಿ ಗಾಳಿಪಟ ಹಾರಿಸುವ ಆಸೆ

ಅಪ್ಪ ತಂದುಕೊಟ್ಟ ಆ ಗೊಂಬೆಗೆ ತಲೆಬಾಚಬೇಕೆಂಬ ಆಸೆ

ಒಂದು ದಿನ ಇದನೆಲ್ಲಾ ಕಳೆದುಕೊಳ್ಳುವೆ ಎಂದು ಯೋಚಿಸಿದ್ದೆ ಇಲ್ಲ....

ಇಂದು ಎಲ್ಲಾ ಕಳೆದುಕೊಂಡುರುವ ನೀ ಯೋಚಿಸುತ್ತಾ ಕುಳಿತಿರುವೆ

ಏನನ್ನು ಕಳೆದುಕೊಂಡಿರುವೆ....ಒಮ್ಮೆ ಇಣುಕಿನೋಡು

ದುಬಾರಿ ಬರ್ಖತ್ತಿನ ಆ ರತ್ನವೋ ?

ಆ 8 ತಾಸಿನ ನಿದ್ದೆಯೊ??

ನೈಕೀಯ ಆ ದುಬಾರಿ ಪಾದುಕೆಗಳೋ ??

ಅಥವಾ ಪುರಾತನದ ಸಾಂಕೇತಿಕ ನಾಣ್ಯವೋ??

ಸಿಕ್ಕಿತೇ ?? ಸಿಗುವುದಿಲ್ಲ ನೀನು ಕಳೆದುಕೊಂಡಿದ್ದು

ಏಕೆಂದರೆ ಅದು ನೀನು ಕಳೆದುಕೊಂಡಿದ್ದಲ್ಲ .... ಕಳೆದುಹಾಕಿದ್ದು

ನೋಡು ಒಮ್ಮೆ ಹಿಂದಿರುಗಿ ನೋಡು

ಅದೆಷ್ಟು ಬೇಗ ಓಡಿಬಂದಿರುವೆ ಎಂದು

ಹೌದು ನಿನ್ನ ನಾಜೂಕು ಕುತ್ತಿಗೆಗೆ

ಭಾರಿಯಾಗಿರಬಹುದು ಆ ಜವಾಬ್ಧಾರಿಯ ಮೇಣ

ಕೊಂದುಹಾಕಿದೆ ಅದು ನಿನ್ನ ನೆಮ್ಮದಿಯನ್ನು

ಈಗ ನೆಮ್ಮದಿ ಸಿಗುತ್ತಿಲ್ಲ ಅಲಾ??

ಜೇಬಿನಲ್ಲಿ ಫೋನು ಕಾಸಿಗಲ್ಲದೆ ಬೇರೆ ಜಾಗವಿದ್ದರೆತಾನೆ

ರಾತ್ರಿ ತಡವಾಗಿ ಮಲಗಿದರೂ ಪರವಾಗಿಲ್ಲ ಬೆಳಗ್ಗೆ ಬೇಗ ಎದ್ದೇಳಬೇಕು

ಪರೀಕ್ಷೆಯಲ್ಲಿ ನಕುಲು ಮಾಡಿ ಬರೆದರೂ ಪರವಾಗಿಲ್ಲ ಅಂಕ ಮಾತ್ರ ಕಡಿಮೆಯಾಗಬಾರದು

ಮನಸ್ಸಿನ ಮಾತಿಗೆ ಕಿವಿಯೇಕೆ ಕೊಡಬೇಕೂ??

ಪ್ಯಾಕೇಜ್ ಶಿಫ್ಟ್ ಏನೇ ಆಗಿರಲಿ ಕೆಲಸವೊಂದು ಇರಲೇಬೇಕು

ವಾರದ ಐದೂ ದಿನ ಮನಸ್ಸಿಲ್ಲದೇ ದುಡಿದರೇನು...

ವಾರದಂತ್ಯದ ಆ ಎರಡು ದಿನ ಜೀವನಪೂರ್ತಿಯ ನೆಮ್ಮದಿ ಕಾಣಬಹುದಲ್ವಾ ?

ನೋಡು... ಇದೆಲ್ಲ ನಿನ್ನನ್ನು ಎಲ್ಲಿಗೆ ಕರೆದೊಯ್ಯುತಿದೆ ಎಂದು

ನಿಲ್ಲು ಎರಡು ನಿಮಿಷ ನಿಲ್ಲು

ನಿನ್ನ ಹೃದಯದ ವೇಗವನ್ನು ಗಮನಿಸು

ಅದರ ಮಾತನ್ನು ಕೇಳಿಸಿಕೋ

ಮನಸ್ಸು ನಿನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತಿದೆಯೋ

ಅಲ್ಲಿಗೆ ಹಾಗೂ

ಹಾಗೆ ಅಲ್ವ ಆಕಾಶದಲ್ಲಿ ಗಾಳಿಪಟ ಗಾಳಿ ಸೆಳೆದಕಡೆ ಹೋಗುವುದು

ಎರಡು ನಿಮಿಷ ಕುಳಿತುಕೋ

ಕುಳಿತು ಕನಸನ್ನು ಕಾಣು, ಬೇರೆಯವರದಲ್ಲ ನಿನ್ನ ಕನಸನ್ನು ಕಾಣು

ಕೆಲವೊಮ್ಮೆ ಕನಸ್ಸು ಕಾಣಲು ಪುರುಸೊತ್ತನ್ನು ಮಾಡಿಕೊ

ಮನೆಯ ಆ ಮೂಲೆಯಲ್ಲಿರುವ ನೆಮ್ಮದಿಯನ್ನು ಅಪ್ಪಿಕೊಂಡು ಕುಳಿತುಕೋ

ಏಕೆಂದರೆ ಕನಸ್ಸುಗಳು ಆಕಾಂಕ್ಷೆಗಳ ಕೊಠಡಿಯಲ್ಲ ಮುಗ್ದತೆಯ ತಾಣ

ಕೆಲವೊಮ್ಮೆ ರಾತ್ರಿ ಕಳೆಯಲು ಕಷ್ಟಕರವಾಗಿರಬಹುದು

ಆದರೆ ಆ ರಾತ್ರಿ ಕಳೆದಮೇಲೆ ಬೆಳಕಾಗುವುದಲ್ವಾ??

ಹಾಗಿದ್ದರೆ ಬಿಡು ಆ ರಾತ್ರಿಯನ್ನು ತನ್ನ ವೇಗವನ್ನು ಪಾಲಿಸಲು

ಕಷ್ಟಕರವಾದರೇನು ಅದು ನಿನ್ನ ರಾತ್ರಿಯೇ ಆಲ್ವಾ ?

ಆಕಾಶದಲ್ಲಿರುವ ಆ ಚಂದ್ರ ಎಲ್ಲದ್ದರಾಗಿದ್ದರೇನು

ನಿನ್ನನ್ನು ಆ ಚಂದ್ರನೊಂದಿಗೆ ಹೋಲಿಸುವ ಆ ಹುಚ್ಚು ಪ್ರೇಮಿ

ಅವನು ನಿನ್ನವನೇ ಆಲ್ವಾ...

ಸಾಹಿರ್ ನ ಪ್ರೀತಿ ಪಡೆಯುವ ಆಸೆಯಲ್ಲಿ

ಅಮೃತ ಇಂರೋಜ್ ನ ಪ್ರೀತಿಯನ್ನು ಗುರುತಿಸಲೇ ಇಲ್ಲ...

ಸಾಹಿರ್ ನಿನ್ನ ಜೀವನಕ್ಕೆ ಉತ್ಸಹತುಂಬುವವನಾಗಿರಬಹುದು ಹೌದು

ಆದರೆ ಇಂರೋಜ್ ನಿನ್ನ ನೆಮ್ಮದಿ

ಗಜಕೇಸರಿಯಲ್ಲಿ ಕೃಷ್ಣ ನದಿಯಲ್ಲಿ ಬಿಡಿದಕ್ಕೆ ಆಲ್ವಾ

ಮೀರಾ ಅವನಿಗೆ ಸಿಕ್ಕಿದ್ದು

ಅದಕ್ಕೆ ಕೆಲವೊಮ್ಮೆ ತಪ್ಪಾದರೆ ಏನು....ಆಗಲಿ ಬಿಡು

ಬದುಕು ತನ್ನ ಆಟವನ್ನು ಆಡಲಿ

ನೀನು ಇದರಲ್ಲಿಯೇ ನೆಮ್ಮದಿಯನ್ನು ಕಂಡುಕೂ

ಆ 5 ಸ್ಟಾರ್ ಚಾಕಲೇಟ್ ನ ಜಾಹಿರಾತು ನಿನಗೆ ಗೊತಿರಬೇಕು ಅಲ್ವ

ಅದ್ರಲ್ಲಿ ಹೇಳುವ ಹಾಗೆ " ಕೆಲವೊಮ್ಮೆ ಏನು ಮಾಡದೇ ಇರು "

ನೀನು ಬಯಸಿದ್ದು ನಿನ್ನ ಪಾಲಿನದ್ದಾಗಿದ್ದರೆ

ನಿನಗದು ಸಿಕ್ಕೇ ಸಿಗುತ್ತದೆ

ನಿನಗಾಗಿ ನೀನು ಪುಸ್ತಕಗಳನ್ನು ಕರೀದಿಸು

ಅಪರಿಚಿತರೊಂದಿಗೆ ಎಲ್ಲಿಗಾದರೂ ಹೋಗು

ಕಥೆಗಳನ್ನು ಕೇಳು... ಕವಿತೆಗಳನ್ನು ಓದು...

ನಿನಗೆ ಇಷ್ಟವಾದ ಆ ಸಾಲನ್ನು ಮತ್ತೆ ಮತ್ತೆ ಓದು

ನಿನಗೆ ಗೊತ್ತಿಲ್ಲ ನಿನ್ನ ನಿತ್ಯಜೀವನ ನಿನ್ನನ್ನು ಯಾವಾಗ ಕರೆಯುವುದೆಂದು

ತಡವಾದರೆ ಪರವಾಗಿಲ್ಲ ಕೂರು ಓದು

ತಡವೇಕಾಯಿತು ಎಂದು ಕೇಳಿದಲ್ಲಿ

ಹೇಳು.. " ಜೀವುಸುವುದರಲ್ಲಿ ವ್ಯಸ್ತಳಾಗಿದ್ದೆ " ಎಂದು...

6 views

Recent Posts

See All

Commentaires

Les commentaires n'ont pas pu être chargés.
Il semble qu'un problème technique est survenu. Veuillez essayer de vous reconnecter ou d'actualiser la page.
bottom of page