top of page

ನಿನ್ನದೇ ಆಯ್ಕೆ...!

Chinthana

ಸಾವಿರ ಜನ್ಮದ ಪುಣ್ಯವೋ ಏನೋ

ಮನುಜನಾಗಿಹೆ ನೀ ... ಈ ಜನ್ಮದಿ

ಶರಧಿಯಂತಹ ಈ ಜಗದಿ

ನಾ...ನೀ... ಎಲ್ಲರು ಕೇವಲ ಅಣುವೋ....

ನಿನ್ನ ಈ ಜೀವನ, ನಿನ್ನದೆ ಆಯ್ಕೆ...

ಪಶ್ಚಾತಾಪದಿ ಬಳಲುವೆ, ಮಾಡದಿರ್ದೊಡೆ ಸದ್ಬಳಕೆ..

ನೆಗಳರೊಡನೆ ಸೇರಿ, ದಾರಿ ಮಾಡಿಕೊಳ್ಳುವೆಯೋ ಸ್ವರ್ಗಕ್ಕೆ?

ಪಾತಕರಲ್ಲಿ ಬೆರತು, ಮಡಿದೀಡಾಗುವೆಯೋ ನರಕಕ್ಕೆ?

ಎತ್ತಿಂದೆತ್ತಲೋ ನಿನ್ನ ಪಯಣ, ಅದು ನಿನ್ನದೇ ಆಯ್ಕೆ.

ಬದುಕೆಂಬ ಈ ಪಯೋನಿಧಿದಿ

ಮನುಜರೇ ಮಿನುಗುವ ಮೀನು

ಅಗೋ ಅಲ್ಲಿ ಸೂತ್ರದಾರ, ಬೆಸ್ತನ ವೇಷದಿ

ಒಲ್ವಡಿದು ನಮ್ಮೆಲ್ಲರ ಅಂತ್ಯದ ಬಲೆಯನು

ಇಗೋ ಇಲ್ಲು ಆಯ್ಕೆಯೇ...

ಕಷ್ಟವೋ..... ಸುಖವೋ

ಇಷ್ಟವೋ ನಷ್ಟವೋ

ಮಾಡುವೆಯೋ..... ಇಲ್ಲ ಮಡಿಯುವೆಯೋ.....ಸಾಗರದಂತಹ ಈ ಪಯೋನಿಧಿಯಲ್ಲಿ

ಸಾಧಿಸಿ ಆಗುವೆಯೋ ಹನಿ ಮುತ್ತು

ಇಲ್ಲವೇ ಅಂಜಿ ... ಹೆದರಿ...

ಅನ್ಯರ ಸಾಧನೆಯ ಸೇವರಿಸದೆ

ಸೇರುವೆಯೋ ಮಣ್ಣು ಆಗಿ ವ್ಯರ್ಥ ಸಂಪತ್ತು

ಎತ್ತಿಂದೆತ್ತಲೋ ನಿನ್ನ ಪಯಣ, ಅದು ನಿನ್ನದೇ ಆಯ್ಕೆ…

ಆಯ್ಕೆ ಎಂಬ ಇಕ್ಕಟ್ಟಿನಲ್ಲಿ ಚಿಂತಿಸುತ್ತಿರುವ ಚಿಂತನ..

Comments


  • Instagram

Follow us on Instagram

LitSoc DSI

bottom of page