ಆಡುತಾ ಆಡುತಾ
ಮುದ್ದಾದ ಮಾತಾಡುತಾ;
ಆಡುವ ಮಾತು ತುಸು ಮೌನವ ತಾಳುತಾ.
ಹುಡುಕುತಾ ಹುಡುಕುತಾ
ಹೊ ಸ ದಾರಿಯ ಹುಡುಕುತಾ
ಹುಡುಕುವ ಸಮಯದಲ್ಲಿ ನಾ ಬಾನಿಗೆ ಹಾರುತಾ.
ಚಂದಿರನ ಮುದ್ದಾಡಲು ಓಡುವ ಮೋ ಡದ ಪ್ರೀತಿ,
ಮರಕೆ ಜೋ ಗುಳ ಹಾಡಲು ಸಾಗುವ ಗಾಳಿಯ ಪ್ರೀತಿ,
ಭೂಮಿ ತಂಪಾಗಿರಲು ಹರಿಯುವ ನೀ ರಿನ ಪ್ರೀತಿ,
ಮಗು ನಗುವ ಕಾಣುವ ತಾಯಿಯ ಪ್ರೀತಿ;
ಎಲ್ಲಪ್ರೀತಿಯು ಒಂದಾಗಿ ಸೇ ರಿದೆ ನನ್ನಲ್ಲಿ
ಆ ಪ್ರೀತಿ ಬಚ್ಚಿಡುವೆ ನಾ ನಿನ್ನಲ್ಲಿ.
ಸುಂದರ ಅಲೆಗಳ ಮೋ ರೆಯ ಕೇ ಳುವೆಯ
ತೇ ಲುವ ಗಾಳಿಯ ಸಂಪನು ಸೂಸುವ ಬಾಣದಿಂದ,
ಜಾರುವ ಸೂರ್ಯ ನ ಕಾಣುವೆಯ
ಅಳೆಯಲಾಗದ ನನ್ನ ಪ್ರೀತಿಯ ಸವಿಯುವೆಯ||
ದಡದ ಒಡಲೆ ಮರಳು
ಸುಂದರ ನೋ ಟದ ಕಡಲು
ನನ್ನ ಪ್ರೀತಿಯೇ ಅವಳು
ಅವಳೇ ...ನನ್ನವಳು
Comments