ಆ ಬಾಲ್ಯದ ದಿನಗಳು
- Abhiram Aithal
- Jul 31, 2023
- 1 min read
ಕಷ್ಟಗಳ ಅರಿವೇ ಇಲ್ಲದೆ
ಸದಾಕಾಲ ಹಸನ್ಮುಖಿಯಾಗಿ
ಮುಗ್ದತೆಯ ತೋರುತ
ಕಳೆದೆವು ಬಾಲ್ಯದ ದಿನಗಳ ..
ಚಾಕ್ಲೇಟ್ ಬೇಕೆಂದು ಅಮ್ಮನಿಗೆ ಪೀಠಿಕೆ ಹಾಕುತ
ಆಟಿಕೆ ಸಾಮಾನಿಗೆ ಅಪ್ಪನಿಗೆ ಮಸ್ಕಾ ಹೊಡೆಯುತ
ಸಿಗದಾಗ ಹುಸಿ ಕೋಪದಿ ರಂಪಾಟ ಮಾಡುತ
ಚಿಂತೆಯಿಲ್ಲದೆ ಕಳೆದೆವು ಬಾಲ್ಯದ ದಿನಗಳ..
ಶಾಲೆಗೆ ಹೋಗಲು ಹಟವ ಮಾಡುತ
ಓದಲು ಹಿಂದೇಟು ಹಾಕುತ
ಆಗಾಗ ತುಂಟಾಟಗಳನು ಮಾಡುತ
ಸಂತೋಷದಿ ಕಳೆದೆವು ಬಾಲ್ಯದ ದಿನಗಳ..
ರಜೆ ಬಂದಾಗ ಅಜ್ಜಿಯ ಮನೆಗೆ ಹಾರುತ
ಗೋಲಿ ಬುಗುರಿ ಆಟವನಾಡುತ
ಮಣ್ಣಲಿ ಕುಣಿಯುತ ನೀರಲಿ ಆಡುತಾ
ಮಜದಲಿ ಕಳೆದೆವು ಬಾಲ್ಯದ ದಿನಗಳ ..
Comments