top of page
Prashanth Ganapathi Bhat

ಆನಂದ - ಸ್ವಾಮಿ ವಿವೇಕಾನಂದ

ಹರ ಮುನಿದರೂ ಗುರು- ಕಾಯುವೆನೆಂದ

ಅವರ ನಾಮ ಕೇಳಿದರೇ ಭಕುತನಿಗಾನಂದ

ಅವರೇ ನಮ್ಮ ಗುರು ಸ್ವಾಮಿ ವಿವೇಕಾನಂದ||


ಆಧ್ಯಾತ್ಮವೆಂಬ ಗರಡಿ ಮನೆಯಲ್ಲಿ

ಶ್ರೀ ರಾಮಕೃಷ್ಣರೆಂಬ ಜಗಮಲ್ಲರ ಬಳಿಯಲ್ಲಿ

ಸಾಧನೆಗೈದ ಈ ಆನಂದ

ಅವರೇ ಶ್ರೀ ಗುರು ವಿವೇಕಾನಂದ||


ನರೇಂದ್ರನಿಂದ ವಿವೇಕಾನಂದರಾಗಿ

ಯುವಕರಲ್ಲಿನ ಜಡ ಆಲಸ್ಯ ಕಿತ್ತೊಗೆದು

ದೇಶಪ್ರೇಮದ ಹುಚ್ಚೆಬ್ಬಿಸಿದ ಈ ಪರಮಾನಂದ

ಅವರೇ ಶ್ರೀ ಗುರು ವಿವೇಕಾನಂದ||


ಭಾರತದುದ್ದಗಲಕ್ಕೂ ಸಂಚರಿಸಿ

ಗುರು ರಾಮಕೃಷ್ಣರ ಭೋದನೆಗಳನ್ನು ಪಸರಿಸಿ,

ನವಯುವ ಚೈತನ್ಯಕ್ಕೆ ದಾರಿದೀಪವಾದ ಈ ಜಗದಾನಂದ

ಅವರೇ ಶ್ರೀ ರಾಮಕೃಷ್ಣರ ತನಯ ಶ್ರೀ ಸ್ವಾಮಿ ವಿವೇಕಾನಂದ||


4 views

Comments


bottom of page