ನಿನ್ನಲ್ಲಿದೆ ಅದೇನೋ ಮೋಡಿ
ಸಮಯವು ನಿಂತಿದೆ ನಿನ್ನನು ನೋಡಿ,
ಮನದಲಿ ಮೂಡಿದೆ ಖುಷಿಯಿಂದು
RCBಗೆ ಬಂದಂತೆ ABD.
ನಿನ್ನೆದುರು ನಾನಾಗುವೆ ಮೌನಿ
ನಾ ನಿನ್ನ ಸದಾ ನೆನೆಯುವ ಧ್ಯಾನಿ
ಆಗುವೆಯಾ ಎನ್ನ ಹೃದಯದ ಪ್ರಧಾನಿ,
ಏರುವ ಬಾ ಪ್ರೀತಿಯ ದೋಣಿ.
ನನ್ನ ಮೌನವ ತಿಳಿಯುವೆಯಾ ನೀ?
ನನ್ನ ಪ್ರಾರ್ಥನೆ ಕೇಳುವೆಯಾ ನೀ?
ನಿನ್ನ ಹೃದಯದಿ ಆಶ್ರಯ ಪಡೆಯಲು
ಎಂದಾದರು ಬಿಡುವೆಯಾ ನೀ?
ಸದಾ ನಿನ್ನ ಖುಷಿಯನು ಬಯಸುವ
ನಿನ್ನ ಪ್ರೀತಿಗಾಗಿ ಹಂಬಲಿಸುವ
ನಾ ನಿನ್ನವನಾಗಲೆಂದು ಆಶಿಸುವ
ಇಂತಿ ನಿನ್ನವ;
Comentarios