top of page

ಇನ್ನೊಂದ್ ವರ್ಷ

Saahitya Sangha

ವರುಷದ ಪ್ರತಿ ದಿನ ಆನಂದಿಸಿ, ಹಂಚುತಿರಲಿ ಹರುಷವ ಪಸರಿಸಿ

ಪ್ರೀತಿಸುವ ಪ್ರತಿ ಕನಸುಗಳನ್ನು ಹರಸಿ ,ಹಾರೆಂದೆನ್ನಲಿ ರೆಕ್ಕೆಗಳನ್ನು ಅಂಟಿಸಿ

ನಲಿವನ್ನು ಪ್ರತಿ ನಿಮಿಷ ಸೇರಿಸಿ ,ನಗಿಸುತಿರಲಿ ನೋವುಗಳನ್ನು ಅಳಿಸಿ

ಜೀವನದ ಪ್ರತಿ ಹೆಜ್ಜೆ ನಡೆಸಿ, ಜೊತೆಯಾಗಲಿ ವರುಷವಿಡಿ ಆರೈಸಿ


ಹೊರಗೆ ಹೊಸ ವರ್ಷದ ಸಂಭ್ರಮ

ಒಳಗೆ ಹಳೆ ನೆನಪುಗಳ ನೋವಿನ ಅನುಭವ

ಸಾಗುವುದು ಬದುಕು ನಿನ್ನ ಅನುಪಸ್ಥಿತಿಯಲ್ಲೂ

ಆದರೆ ಮನಸು ಬೇಡಿದೆ ಕನಸಲ್ಲೂ ನಿನ್ನ ಹಾಜರಿಯನ್ನು

ನಿನ್ನದೇ ನಿರೀಕ್ಷೆಯೊಂದಿಗೆ ತೆರೆಯತಿರುವೆ ಹೊಸ ಖಾತೆಯನು

ತುಂಬಲು ಹೊಸ ವರ್ಷದ ಸಿಹಿ ಅನುಭವಗಳನು!


ಎಂದಿನಂತೆ ಬರುತಿದೆ ಒಂದು ಹೊಸ ವರ್ಷ

ಹುಮ್ಮಸ್ಸಿನಲ್ಲಿ ತೆಗೆಯುವರು ಎಲ್ಲರೂ ನಿರ್ಣಯ

ಕೆಲ ದಿನಗಳಿಗೆ ಮಾತ್ರ ಸೀಮಿತವಾಗಿರುವುದು, ಅದನ್ನು ಪಾಲಿಸುವ ಹರ್ಷ

ನಂತರ ಆಗುವುದು ಮುಂದಿನ ಹೊಸ ವರ್ಷಕ್ಕೆ ಅದು ಮಾಯ


ಹೊಮ್ಮಿ ಬರುವುದು ಎಲ್ಲರನ್ನೂ ನೋಡುತಾ, ಉತ್ಸಾಹ

ಚಿಮ್ಮಿ ನಗುವುದು ಮನಸು, ನಗು ಮುಖಗಳ ನಡುವೆ

ಎರಡೇ ಕ್ಷಣಗಳ ಸಂತೋಷ, ಎರಡೇ ದಿನಗಳ ಪ್ರೋತ್ಸಾಹ

ನಗುಮುಖಗಳು ಮರಳಿ ಎಲ್ಲಿ ಅಡಗಿಕೊಂಡವೊ ಗುರುವೇ ?


ಎಂದಾದರೇನು, ಮಾಡುವ ಕೆಲಸ ಮಾಡಲೇಬೇಕು

ಹೆಂಗಾದರೇನು, ಕಷ್ಟವನ್ನು ಶ್ರಮದಿಂದ ಸೀಳಲೇಬೇಕು

ವರ್ಷ ಹೊಸದಾದರೇನು, ಕಾಲಕ್ಕೆ ನಾವು ಹಳೆಬರೇ

ಹುಮ್ಮಸ್ಸು ಕಮ್ಮಿಯಾದರೇನು, ಬಿಡುವುದಿಲ್ಲ ನಿರ್ಣಯವ ಅರೆಬರೆ

7 views

Comentários


  • Instagram

Follow us on Instagram

LitSoc DSI

bottom of page