top of page
Chintana

ಈ ಶತಮಾನದ ಮಾದರಿ ಹೆಣ್ಣು

ಯುಗವು ಕಲಿಯಾಗಿದೆ

ಒಡಲೀಗ ಬಂಜೆ-ಬರಡಾಗಿದೆ

ಸ್ತ್ರೀ- ಪುಂ ಲಿಂಗಗಳು ಸಮನಾಗಿ

ನಾ-ಮೇಲು ತಾ-ಮೇಲು ಎನ್ನತೊಡಗಿದೆ


ಮದುವೆ-ಮುಂಜಿ ಬರಿ ಅರ್ಥಹೀನ

ಮಕ್ಕಳು ಮರಿ ಎಂದೂ ಕರಗದ ಜವಾಬ್ದಾರಿಯ ಮೇಣ

ಹೆಣ್ಣು ತಾನು ಹೆಣ್ಣೆಂದು ಮರೆತು

ತಾಯ್ತಾನದ ಸವಿಯಾದ ಸಾರವ ಮಣ್ಣಾಗಿಸಿದ್ದಾಳೆ


ಮಗು ಹೆರಲು, ಹೊರಲು ನೋವು

ಬೇರೊಬ್ಬಳು ಹೆತ್ತು ಕೊಡಲಿ

ಸಾಕಲು ಕಿರಿಕಿರಿ ಕಷ್ಟ

ಬೇರೊಬ್ಬಳು ನೋಡಿಕೊಳ್ಳಲಿ

ಇದು ಈ ಶತಮಾನದ ಮಾದರಿ ಹೆಣ್ಣು......


ಬಾಡಿಗೆ ತಾಯ್ತಾನ ಎಲ್ಲೆಲೂ ಹರಡಿದೆ....

ನನ್ನ ಮಗು ಎಂಬ ಹೊಂಬಲ, ಎಲ್ಲೋ ಹುಡುಗಿಹೋಗಿದೆ.

ನನ್ನ ಸೌಂದರ್ಯವೇ ನನಗೆ ಎಲ್ಲಾ....

ನನಗೆ ನನ್ನ ಶಿಶು ಎನ್ನುವುದು ಏನೇನು ಅಲ್ಲ.....

ಹೀಗನ್ನುವಳು.... ಈ ಶತಮಾನದ ಮಾದರಿ ಹೆಣ್ಣು.


ಬಸರಿಯಲ್ಲಿ ಬಯಸಿದ್ದೆಲ್ಲ ಬೇಕು

ಆದರೆ....

ಮಗುವಿಗೊದಗಬೇಕಾದ ತನ್ನ ಹಾಲು ಮೂರೆ ತಿಂಗಳಿಗೆ ಸಾಕೇ ಸಾಕು

ರೂಪ ಲಾವಣ್ಯವೇ ಎಲ್ಲೆಲ್ಲೂ ಅಬ್ಬರಿಸುತ್ತಿರುವಾಗ,

ಅದಕ್ಕೆ ಮಣಿದಳು ಈ ದೇಶದ ಮಾದರಿ ಹೆಣ್ಣು


ಬಾಟಲಿಯ ಹಾಲು ಮಗುವಿಗೆ...,

ನಾ ಒಟ್ಟು ಕೊಡುವೆ ನನ್ನ ಸೊಬಗಿಗೆ...

ಜನನಿಯ ಜನಗಳಲ್ಲಿ ಕಳೆದು ಹೋಗಿದ್ದಾಳೆ...

ವಾತ್ಸಲ್ಯ ಮಮತೆಯ ನುಚ್ಚು ನೂರು ಮಾಡಿದ್ದಾಳೆ

ಇವಳೇ ಈ ದೇಶದ ಮಾದರಿ ಹೆಣ್ಣು.


ಇವಳೇ ಈ ದೇಶದ ಮಾದರಿ ಹೆಣ್ಣು

ಸ್ವಾಭಮಾನದಲ್ಲಿ ತನ್ನನ್ನು ರೂಪಿಸುತ್ತ...

ಸಾಹಸದಲ್ಲಿ ಮೂಲ ಮಂತ್ರಗಳ ಮರೆತಿರೊ ಹೆಣ್ಣು

16 views

Comentarios


bottom of page