ಚಿಮ್ಮಲು ನೆತ್ತರಿಗೆ ಕಾತುರವು ,
ಕೂಗಲು ನೇಸರಕ್ಕೂ ಆತುರವು
ತುಸು ನೆತ್ತರನೂ ಲೇಪಿಸಿಕೊಂಡಂಗೆ
ಕಂಡನು ಭಾಸ್ಕರನೂ
,
ಶಿವನ ಜಡೆಯಿಂದ ಧರೆಗಿಳಿದ ಗಂಗೆಯ ದಡದಲ್ಲಿ,
ಕಾವೇರಿ , ಕೃಷ್ಣೆ,ಗೋದಾವರಿಯ ಮಡಿಲಲ್ಲಿ
ಹನಿ ನೀರು ಯಾರದೋ ಕಂಬನಿಯ ಹುಳದಂತೆ
ನೆತ್ತರಿನ ಜಲದಂತೆ ರುಚಿಸಲು ಕಾರಣವೂ ಮತ್ಸರವೂ.
ಇದಕ್ಕೆಲ್ಲಾ ಕಾರಣವೂ ಒಂದೆಡೆಗೆ ಮಂದಿರವು
ಈ ಕಡೆಗೆ ಮಸೀದಿಯೂ
ತಡರಾತ್ರಿಯಲ್ಲಿ ಯಾರದೊ ಸ್ವಾರ್ಥದಿಂದ
ಹೊಡೆದು ಕೆಡುವ ಮಾತಿನಿಂದ
ಕೊಡಲಿ ಹಿಡಿದು ಒಬ್ಬಗೊಬ್ಬ ಥಳಿಸಿಕೊಂಡು
ನೆತ್ತರನ್ನಿಳಿಸಿಕೊಂಡಿದ್ದನ್ನು ಕಂಡೆ ನಾ ಮರದ ಮೇಲಿಂದ!
ಎನ್ನ ದೇವ ಮೇಲಂದು ನನ್ನ ಗುಡಿಯೆ ಮೇಲೆಂದು ಥಳಿಸಿಕೊಳ್ಳುವಾಗ,
ಎನ್ನ ಮರದ ಬುಡವ ಕಡಿದರೂ
ಅವರವರ ಗುಡಿಗಳ ಜಗಳದಲ್ಲಿ
ಎನ್ನ ಗುಡಿಯ ಕಡಿದರೆಕೇ ಎನ್ನ ಗುಡಿಯ ಕೊಂದರೆಕೇ?
ಎನಗೇನು ಧರ್ಮವುಂಟೆ ಎನಗೇನು ಜಾತಿಯುಂಟೆ?
ನಾ ಎರಡು ರೆಕ್ಕೆ ಪುಕ್ಕ ಇರುವ
ಮರದ ಮೇಲೆ ಗೂಡನ್ನು ಕಟ್ಟಿರುವ ಗಿಳಿಯೂ
ಎನ್ನ ಗುಡಿಯನೇಕೆ ಕೊಂದೆ ದೇವರೆಂದರೆ
ಆ ರಾಮರಹಿಮರಿಗೂ ಉತ್ತರಿಸಲು ತಾತ್ಸಾರವೂ;
ಚಂದ್ರ ಹೋಗಿ ಸೂರ್ಯ ಬಂದರೂ ನಿಲ್ಲಲಿಲ್ಲ ನೆತ್ತರು
ನೀರ ಬಣ್ಣ ಬದಲಾಗಿ ಕಿರುಚಿತ್ತು ಜಲದುಸಿರು
ಮನುಜ ಬದುಕಲುಂದು ಧರ್ಮ ಸಾಕು ಅದನ್ನುಳಿಸಲು
ನೆತ್ತರೇಕೆಂದು ಕೂಗಿದರು ಕೇಳಿಸದ ಕಿವಿಗಳು ಬಿಡಲಿಲ್ಲ ಕೊಡಲಿಯನ್ನು.
ಆಗ ಟೋಪಾಲು ಧರಿಸಿದ ಕಂದನೆಡೆಗೆ
ಉದ್ದ ನಾಮಧರಿಸಿದ ಮಗು ಬಂತು
ಒಬ್ಬರನ್ನೊಬ್ಬರು ನೋಡಿಕೊಂಡು ನಕ್ಕರು;
ಸುತ್ತ ನೆತ್ತರಿನ ವಾಸನೆ ನಡುವೆಯಲೂ ಹೆಸರನ್ನು ಕೇಳಿಕೊಂಡರು
ಟೋಪಾಲು ಧರಿಸಿದ ಚಂದ್ರನ ಹೊಲುವವ ಹೇಳಿದ ಎನ್ಹೆಸರು ರಹಿಮನೆಂದು
ನಗುಮುಖದ ಸೂರ್ಯ ತೇಜನೇಳಿದ ಎನ್ಹೆಸರು ರಾಮನೆಂದು!!
--
Comments