top of page
  • Nivedita G Nair

ಒಂದು ಘಟಕ ಹಲವು ಘಟನೆ

೧೯೯೩

ನಿವ್ಯ ಇನ್ನು ಜನಿಸಿರಲಿಲ್ಲ

ಜನಿಸಿದ್ದರೂ , ಬಹುಷಃ

೧೮೯೦ರಲ್ಲಿ ಜನಿಸಬೇಕಿತ್ತು ಎಂದು ಆಶಿಸುತ್ತಿದ್ದಳೇನೋ


೨೦೦೩

ನಿವ್ಯ ಆಗ ತಾನೇ ಧರೆಗಿಳಿದಿದ್ದಳು

ಒಂದೆರಡು ಮಾಸಗಳು ಕಳೆದಿತ್ತು

ಭಾರತದಲ್ಲೂ ಆಗ ತಾನೇ ಅಂತರ್ಜಾಲ ಸದ್ದು ಮಾಡಿತ್ತು

ಬಿಪಿಓಗಳಲ್ಲಿ ನೌಕರಿಗಾಗಿ ಸಂಘರ್ಷ ಹೆಚ್ಚಾಗಿತ್ತು


೨೦೧೩

ನಿವ್ಯ ತನ್ನ ಜೀವನಾವಧಿಯ ೧೦ ವರ್ಷಗಳು ಕಳೆದಿದ್ದಳು

ಶಾಲೆಗೆ ಹೋಗಿ ಬಂದು ತನ್ನಲಿ ತಾನೇ ಮಗ್ನಳಾಗಿದ್ದಳು

ಇವರ ಮನೆಯಲ್ಲಿ ೩ ಜನ

ಅಪ್ಪ, ಅಮ್ಮ, ನಿವ್ಯ

ಹೇಳಿಕೊಳ್ಳಲು ಒಂದೆರಡು ಸ್ನೇಹಿತರು

ಯಾವುದರ ಕಷ್ಟವೂ ತಿಳಿಯದೆ

ಆಕಾಶದಲ್ಲಿ ಹಾರಾಡುವ ಹಕ್ಕಿಯಂತೆ ಸಾಗುತಿತ್ತು ಇವಳ ಪಯಣ


ye೨೦೨೩

ನಿವ್ಯ ತನ್ನ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿದಳು

ಎಲ್ಲರ ಹಾಗೆ ಇವಳಿಗೂ ಸಾಫ್ಟ್ವೇರ್ ನೌಕರಿಯೇ ಸಿಕ್ಕಿತು

ವೇತನವೇನೋ ಸುಮಾರಾಗೇ ಇತ್ತು ಆದರೆ ಮಾಡುವ ಆಸಕ್ತಿ ಇವಳಿಗಿರಲಿಲ್ಲ

ಇವಳಿಗೆ ಭಾರತ ಎಂಬ ಕನಸ್ಸನ್ನು ಕಟ್ಟುವ ಕಿಚ್ಚು

ಇತಿಹಾಸದ ಪುಟಗಳಲ್ಲಿ ತನ್ನ ಹೆಸರನ್ನು ಅಡಗಿಸಿಕೊಳ್ಳುವ ಹುಚ್ಚು


೨೦೫೩

ನಿವ್ಯ ವ್ಯವಹಾರಿಕ ಸಾಂಸಾರಿಕ ಬಂಧನಗಳಿಂದ ಮುಕ್ತಳಾದಳು

ಜೀವನದ ಮಹತ್ವವನ್ನು ತಿಳಿಯಲು

ಮಾನಸಿಕ ನೆಮ್ಮದಿಯನ್ನು ಹುಡುಕುತ್ತಾ

ಇಂದ್ರಿಯಗಳಿಗೆ ಶರಣಾಗದೆ ಗೋದಾಸನ ಸೇವಕಿಯಾದಳು


ಹೇಗೇಗಾಯಿತು ಎಂದು ತಿಳಿದುಕೊಳ್ಳಲು

ಸ್ವಲ್ಪ ಕಹಾನಿ ರಿವೈ೦ಡ ಮಾಡೋಣ ...

೨೦೧೨ ನಿರ್ಭಯ ರೇಪ್ ಹಾಗು ಹತ್ಯಕಾಂಡ ...

ಗಲ್ಲು ಶಿಕ್ಷೆಯಾಗಿದ್ದು ೨೦೨೦ರಲ್ಲಿ ..

೨೦೧೯ ಆಂಟೀ ಸಿಎಎ ಹೋರಾಟ ...

ದೆಹಲಿ ದಂಗೆಗಳು ....

ದೇಶದ ರಾಜಧಾನಿಯ ಒಂದು ಭಾಗ ಸುಟ್ಟು ಬೂಧಿಯಾದರೆ ..

ಮತ್ತೊಂದು ಭಾಗ ಅದರ ಪ್ರಭಾವದಿಂದ ಬೆಚ್ಚಿ ನಿಂತಿತ್ತು ...

೨೦೨೦ ವಿಶ್ವವ್ಯಾಪ್ತಿ ಕೋವಿಡ್ ೧೯ ಹರಡಿತು...

ಆಗಲೂ ಮನುಕುಲದ ಹೋರಾಟ ಕೊರೊನ ವಿರುದ್ಧ ಹೆಸರಿಗೆ ಮಾತ್ರ ...ನಿಜವಾಗಿ ಆದದ್ದು ಪೇಟೆಂಟ್ಗಳಿಗಾಗಿ ಸಂಘರ್ಷ , ...

೨೦೨೨ ..ಹಿಜಾಬ್ , ಲವ್ ಜಿಹಾದ್

ಹೀಗೆ ಧರ್ಮದ ಹೆಸರಿನಲ್ಲಿ ದಂಗೆಗಳು ...

ಯಾವುದೇ ನಿರ್ಧಿಷ್ಟ ಆಕಾರವಿಲ್ಲದ ಪೃಥ್ವಿಯೊಳಗೆ , ಸೀಮೆಗಳನ್ನು ಅಳಿದು , ನನ್ನ ಜಾಗ , ನಿನ್ನ ಜಗವೆನ್ನುವ ಯುದ್ಧ ...

ಹೇಗಿರುವ ಭಾರತ ಇವಳ ಕನಸ್ಸಿನ ಭಾರತವಾಗಿರಲ್ಲಿಲ ,

ಈ ಕನಸ್ಸನ್ನು ನನಸಾಗಿಸಲು ಅವಳು ತನ್ನದ್ದೇಯಾದ ಪ್ರಾಯತ್ನಗಳಲ್ಲಿ ತೊಡಗಿಕೊಂಡಳು ,

ಈಗ ಇತಿಹಾಸದ ಪುಟಗಳಲ್ಲಿ ಹೆಸರಲ್ಲ

ಇತಿಹಾಸವನ್ನೇ ನಿರೂಪಿಸಬೇಕು ಎಂಬ ಹುಚ್ಚು

ಇವಳು ತನ್ನ ಭಾರತವನ್ನು ಪುಸ್ತಕಗಳಲ್ಲಿ ಹುಡುಕುತ್ತಾ

ಇತಿಹಾಸದಲಲ್ಲದಿದ್ದರು ಕವಿತೆಗಳಲ್ಲಿ ತನ್ನ ಹೆಸರನ್ನು ಅಡಗಿಸಿಕೊಂಡಳು

ಕೊನೆಗೂ ತನ್ನ ಕನಸ್ಸಿನ ಭಾರತವನ್ನು ಕಟ್ಟಿಕೊಂಡಳು ....


ಇಲ್ಲಿ ನಿಂತಿರುವ ನೀನು , ಅವಳ ಹಾಗೆ

ನಿನಗೂ ಸಹ ಭಾರತ ಒಂದು ಕನಸ್ಸು

ಆ ಕನಸ್ಸಿನಲ್ಲಿ ಯಾರು ಬೇಕಾದರೂ ಬರಬಹುದು ಹೋಗಬಹುದು

ನಿವ್ಯ, ನೀನೂ ಅವಳಹಾಗೆಯೇ ಕನಸ್ಸಿನಲ್ಲಿ ಬದುಕುವ ಹುಡುಗಿ

ಮುಂದೊಮ್ಮೆ ನೋಡಿದರೂ ನೀನೂ ಅವಳಹಾಗೆ ಕನಸ್ಸಿನ ಹುಡುಗಿ

ಬಹುಷಃ ನೀನೂ ಕೂಡ ೧೮೯0ರಲ್ಲಿ ಜನಿಸಬೇಕಿತ್ತೇನೋ


50 views

Commenti


bottom of page