top of page
Apeksha U

ಕಣ್ಮಣಿ

ನಾ ಬರೆದೆ ಒಲವಿನ ಓಲೆಯ

ಕಣ್ಮುಚ್ಚಿ ನೋಡು ನಾನೇ ನಿನ್ನ ಇನಿಯ !

ಆವರಿಸಿರುವೆ ನೀ ನನ್ನ , ಕೆಂದುಟಿಯ ಗಿಣಿ

ಸ್ವೀಕರಿಸುವೆಯ ಒಮ್ಮೆ, ಓ ನನ್ನ ಕಣ್ಮಣಿ !!


ಬರಡು ಭೂಮಿಗೆ ಸುರಿದ ಸ್ವಾತಿಯ ಮುತ್ತೇ

ಒಪ್ಪಿಕೊಂಡು ಆಲಂಗಿಸಲು ಇನ್ನೆಷ್ಟು ಹೊತ್ತೇ !

ಕೇಳಿಸಿಕೋ ಈ ಗೆಳೆಯನ ಹೃದಯದ ವಾಣಿ

ಸ್ವೀಕರಿಸುವೆಯ ಒಮ್ಮೆ, ಓ ನನ್ನ ಕಣ್ಮಣಿ !!


ಕೆಡಿಸಿತು ಮನವ ನಿನ್ನ ಮುಗುಳ್ನಗೆ

ಧಾರೆ ಎರೆದೆ ನಿನಗೆ ನನ್ನೀ ಜೀವವ ಅದೇ ಘಳಿಗೆ !

ನಮ್ಮನೆಯ ಬೆಳಗುವ ಸ್ಫಟಿಕ ಮಣಿ

ಸ್ವೀಕರಿಸುವೆಯ ಒಮ್ಮೆ, ಓ ನನ್ನ ಕಣ್ಮಣಿ !!


ನೀ ಬರೆದ ಕವಿತೆಯಲ್ಲಿ,

ಮರೆತು ಹೋದ ಪದವಾಗಲಾರೆ ನಾನು ..

ನಾ ಬರೆಯುವ ಕವಿತೆಯಲ್ಲಿ,

ಮರೆಯಲಾಗದ ಸಾಲಾಗಬೇಡ ನೀನು..

ಸ್ವೀಕರಿಸುವೆಯ ಒಮ್ಮೆ, ಓ ನನ್ನ ಕಣ್ಮಣಿ !!

44 views

Comments


bottom of page