top of page
G M Lohith

ಕರ್ನಾಟಕ

ಕನ್ನಡ ಎನೆ ಕುಣಿದಾಡುವುದೆನ್ನದೆ , ಕನ್ನಡ ಏನೆ ಕಿವಿ ನಿಮಿರುವುದು|

ಕಾಮನಬಿಲ್ಲನು ಕಾಣುವ ಕವಿಯೊಳು ತೆಕ್ಕನೆ ಮನ ಮೈ ಮರೆಯುವುದು|

ಕನ್ನಡದಲ್ಲಿ ಹರಿ ಬರೆಯುವನು , ಕನ್ನಡದಲ್ಲಿ ಹರ ತಿರಿಯುವನು .

ಕುವೆಂಪುರವರ ಈ ಸಾಲುಗಳು ಎಷ್ಟು ಅದ್ಭುತವಾಗಿದೆ.


ಕನ್ನಡ ಭಾಷೆ ಮತ್ತು ನೆಲದ ಬಗ್ಗೆ ಇದಕ್ಕಿಂತ ಚೆನ್ನಾಗಿ ವರ್ಣಿಸಲು ಅಸಾಧ್ಯ . ಜಗತ್ತಿನ ಅತ್ಯಂತ ಪುರಾತನ ಮತ್ತು ಶ್ರೀಮಂತ ಭಾಷೆಗಳಲ್ಲೊಂದು ಕನ್ನಡ. ಜಗದೇಕ ವೀರರು ಮತ್ತು ಅಹವಮಲ್ಲರಿಗೆ ಜನ್ಮ ಕೊಟ್ಟ ಭೂಮಿ ಈ ಕರುನಾಡು. ಪ್ರಕೃತಿಯ ಸೊಬಗು,ನದಿಗಳ ಹರಿವು ,ಪಶ್ಚಿಮ ಘಟ್ಟಗಳ ಸೌಂದರ್ಯ ಎಷ್ಟು ವರ್ಣಿಸಿದರು ಸಾಕಾಗದ ಎಕೈಕ ನಾಡು ಕರ್ನಾಟಕ. ಇಂತಹ‌ ಭೂರಮೆಯ ಸ್ಪಗದ ವೈಶಿಷ್ಟ್ ಗಳನ್ನು ಈ ಲೇಖನದಲ್ಲಿ ನೋಡಣ ಬನ್ನಿ . ವಿಕಿಪೀಡಿಯಾದ ಲೋಗೋ ನೋಡಿದರೆ ಅದರಲ್ಲಿರೋ ಕೆಲವೇ ಕೆಲವು ಭಾರತೀಯ ಭಾಷೆಗಳಲ್ಲಿ ಕನ್ನಡ ಕೂಡ ಒಂದು. ಜಗತ್ತಿನ ವಿವಿಧ ಭಾಷೆಗಳ ಜೊತೆಗೆ ಭಾರತದ ಕೆಲವು ಭಾಷೆಗಳಿಗೆ ಸಿಕ್ಕಿರುವ ಗೌರವಕ್ಕೆ ಕನ್ನಡ ಕೂಡ ಪಾತ್ರವಾಗಿರೋದು ನಮ್ಮ ಹೆಮ್ಮ . ಇಂತಹ ಕನ್ನಡ ಸಾಹಿತ್ಯ ಕೂಡ ಅದ್ಭುತ .


ಭಾರತದ ಇತಿಹಾಸದಲ್ಲಿ ಹಿನ್ನಲೆ ಗಾಯನಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಎಕೈಕ ನಟ ನಮ್ಮ ವರನಟ ಡಾ. ರಾಜ್ ಕುಮಾರ್ . ರಾಷ್ಟ್ರೀಯ ಧ್ವಜಗಳನ್ನು ತಯಾರಿಸುವ ಏಕೈಕ ಅಧಿಕೃತ ಘಟಕ ಧಾರವಾಡ ಜಿಲ್ಲೆಯ ಬೆಂಗೇರಿ ಗ್ರಾಮದಲ್ಲಿದೆ. ಪ್ರತಿ ವರ್ಷ ಮೈಸೂರಿನ ಅರಮನೆ ಅತ್ಯಂತ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಡೀ ಭಾರತದಲ್ಲೇ ಮೊಟ್ಟ ಮೊದಲ ರೇಡಿಯೋ ಸ್ಟೇಶನ್ ಆರಂಭಗೊಂಡಿದ್ದು ಕರ್ನಾಟಕದಲ್ಲಿ . ಚುನಾವಣೆಯಲ್ಲಿ ಬಳಸುವ ಇಂಕ್ ಇಡೀ ದೇಶಕ್ಕೆ ಸರಬರಾಜು ಆಗುವುದ ಮೈಸೂರಿನಿಂದ. ಭಾರತದ ಚಲನಚಿತ್ರದ ಇತಿಹಾಸದಲ್ಲೆ ಮೊಟ್ಟ ಮೊದಲ ಅಂಡರ್ ವಾಟರ್ ಶೂಟಿಂಗ್ ನೆಡೆದಿದ್ದು ನಮ್ಮ ವರನಟ ಡಾ. ರಾಜ್ ಕುಮಾರ್ ಅಭಿನಯದ ಮತ್ತು ಶಂಕರ್ ನಾಗ್ ನಿರ್ದೇಶನದ ಚಿತ್ರ "ಒಂದು ಮತ್ತಿನ ಕತೆ".


ಚಾಣಕ್ಯನ ಅರ್ಥಶಾಸ್ತ್ರ ಪುಸ್ತಕದ ಹಸ್ತಪ್ರತಿ ಇರುವುದು ಕರ್ನಾಟಕದಲ್ಲೆ. ಕರ್ನಾಟಕದಲ್ಲಿ ಒಂದು ಕಡೆ ಪಶ್ಚಿಮ ಘಟ್ಟಗಳ ಸಮೃದ್ಧ ಹಸಿರಿದ್ದರೆ ಮತ್ತೊಂದು ಕಡೆ ಬಯಲು ಸೀಮೆಯನ್ನು ಭಾಗ್ಯ ಸೀಮೆಯನ್ನಾಗಿಸೋದಕ್ಕೆ ಮೈದುಂಬಿ ಹರಿಯುವ ನದಿಗಳಿವೆ . ಉತ್ತರ ಕರ್ನಾಟಕದ ವಿಜಯಪುರ ಐದು ನದಿಗಳ ಜಿಲ್ಲೆ. ಚಿಕ್ಕಮಗಳೂರು, ಮಡಿಕೇರಿ, ಹಾಸನ ಜಿಲ್ಲೆಯಲ್ಲಿ ಬೆಳೆಯುವ ಕಾಫಿಯನ್ನು ಸರಬರಾಜು ಮಾಡುವುದರಿಂದ ಅತಿ ಹೆಚ್ಚು ಕಾಫಿ ಸರಬರಾಜು ಮಾಡುವ ರಾಜ್ಯ ಎಂಬ ಹೆಗ್ಗಳಿಕೆಗೆ ನಮ್ಮ ರಾಜ್ಯ ಪಾತ್ರವಾಗಿದೆ . ದೇಶದಲ್ಲೆ ಮೊಟ್ಟ ಮೊದಲ ಬಾರಿಗೆ ಕಾಫಿ ಬೆಳೆದಿದ್ದು ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯಲ್ಲಿಯೇ. ಭಾರತ ದೇಶದ ಇಂಜಿನಿಯರ್ರ್ಗಳಿಗೆ ಗೌರವ ಸಿಕ್ಕಿರುವುದಕ್ಕೆ ಮತ್ತು ಇಡೀ ದೇಶ ಇಂಜಿನಿಯರ್ಸ್ ಡೇ ಆಚರಿಸುವುದಕ್ಕೆ ಕಾರಣ ನಮ್ಮ ರಾಜ್ಯದಲ್ಲಿ ಜನಿಸಿದ ನಮ್ಮ ಹೆಮ್ಮೆಯ ಮೋಕ್ಷಗೋಡಂ ವಿಶ್ವೇಶ್ವರಯ್ಯ . ಇಡೀ ವಿಶ್ವ ಬಾಯಿ ಚಪ್ಪರಿಸಿಕ್ಕೊಂಡು ತಿನ್ನುವ ಮೈಸೂರ್ ಪಾಕ್ ತಯಾರಾಗಿದ್ದು ಮೈಸೂರಿನ ಅರಮನಯಲ್ಲಿ. ಇದು ನಮ್ಮ ಕರ್ನಾಟಕ ನಮ್ಮ ಹೆಮ್ಮ .

Comments


bottom of page