ಕರ್ನಾಟಕದ ಕಿರೀಟ
- Manohar R
- Jun 26, 2023
- 1 min read
ಚಿಕ್ಕಮಗಳೂರು, ಹೆಸರು ಕೇಳಿದರೆ ಸಾಕು ಮೈ ರೋಮಾಂಚನಗೊಳಿಸುವ ನಿಸರ್ಗದತ್ತ ಅನುಭವ ಕಣ್ಣ ಮುಂದೆ ಬರುತ್ತದೆ. ಹಚ್ಚ-ಹಸಿರಿನ ವಾತಾವರಣ ಕಾಫಿಯ ಸುಗಂಧ, ಪ್ರಾಚೀನ ದೇವಾಲಯಗಳು ಈ ಸ್ಥಳದ ಹಿರಿಮೆಯನ್ನು ಹೆಚ್ಚಿಸುತ್ತದೆ.
ಕಾಫಿ ನಾಡು ಎಂದು ಪ್ರಸಿದ್ಧಿ ಪಡೆದಿರುವ ಚಿಕ್ಕಮಗಳೂರಿನ ಹೃದಯ ಭಾಗದಲ್ಲಿರುವುದೇ ಕರ್ನಾಟಕದ ಎತ್ತರದ ಪರ್ವತ "ಮುಳ್ಳಯ್ಯನಗಿರಿ". ಈ ಶಿಖರವು ಸರಿ ಸುಮಾರು ೧೯೩೦ ಮೀಟರ್ ಎತ್ತರವಿದ್ದು, ಪಶ್ಚಿಮ ಘಟ್ಟದ ಚಂದ್ರ ದ್ರೋಣ ಪರ್ವತ ಶ್ರೇಣಿಯಲ್ಲಿದೆ.
ಈ ಶಿಖರದಲ್ಲಿ ಮುಳ್ಳಪ್ಪ ಸ್ವಾಮಿಯ ಗದ್ದುಗೆ ಇದ್ದು, ಮುಳ್ಳಪ್ಪ ಸ್ವಾಮಿಯು ಇಲ್ಲಿ ತಪಸ್ಸು ಮಾಡಿದರೆಂದು ಪುರಾಣಗಳು ಹೇಳುತ್ತವೆ. ದಟ್ಟ ಹಸಿರಿನಿಂದ ಕೂಡಿರುವ ಚಾರಣದ ಹಾದಿಯು ಚಾರಣಿಗರಿಗೆ ಮತ್ತು ಸಾಹಸ ಪ್ರಿಯರಿಗೆ ಸ್ವರ್ಗದ ಅನುಭವ ನೀಡುತ್ತದೆ.
ಬೆಂಗಳೂರಿನಿಂದ ಸುಮಾರು ೩೦೦ ಕಿಲೋಮೀಟರ್ ದೂರದಲ್ಲಿರುವ ಮುಳ್ಳಯ್ಯನಗಿರಿಯು, ಬೆಟ್ಟಗುಡ್ಡಗಳ ಸಾಲಿನ ದೊಡ್ಡಣ್ಣ. ವಿಸ್ತಾಡೋಮ್ ರೈಲಿನಲ್ಲಿ ಪ್ರಯಾಣಿಸಿದರೆ ಪಶ್ಚಿಮ ಘಟ್ಟಗಳ ಸುಂದರ ಪ್ರಕೃತಿ ರಮಣೀಯ ದೃಶ್ಯಗಳನ್ನು ಸವಿಯುವ ಅವಕಾಶವನ್ನು ನೀಡುತ್ತದೆ. ಮುಂಗಾರಿನ ಈ ದಿನಗಳಲ್ಲಿ ದೊಡ್ಡಣ್ಣನ ಸೊಬಗೇ ವಿಸ್ಮಯ
Commentaires