ಕಟ್ತೀವಿ ಪೆನ್ನು ಇಂಕಿಂದ ಕಂದಾಯ, ಇದುವೇ ನಮ್ಮ ಕವಿಗಳ ಸಮುದಾಯ
ಒಮ್ಮೆ ಮೇಧಾವಿಯಂತೆ, ಇನ್ನೊಮ್ಮೆ ಹುಚ್ಚರಂತೆ
ಮತ್ತೊಮ್ಮೆ ಭ್ರಮಿಕರಂತಾಡುವ
ಆ ನಮ್ಮಂತ ಬರಹಗಾರರು ಅನುಭವಿಸುವ
ಸಿಹಿಸಂಕಟಗಳ ಕಿರು ಪರಿಚಯ ಹೀಗಿದೆ...
ಕಟ್ತೀವಿ ಪೆನ್ನು ಇಂಕಿಂದ ಕಂದಾಯ, ಇದುವೇ ನಮ್ಮ ಕವಿಗಳ ಸಮುದಾಯ
ಕೈಯಲ್ಲಿ ಲೇಖನಿ ಹಿಡಿದು ಇಲ್ದೀರೊ ಉಗ್ರು ಕಚ್ತಾ
ಕಣ್ಣಗಳ್ನ ಹುಣ್ಣಿಮೆ ಆಕಾಶದಲ್ ಚಂದ್ರನ್ ಹುಡ್ಕಕ್ ಬಿಟ್ಟು
ಏನ್ ಬರಿಲಿ ಅಂತ ಯೋಚ್ಸೋರ್ ಒಂದ್ಕಡೆ ಆದ್ರೆ
ಮನ್ಸಿಗ್ ಬಂದಿದ್ದ್ನ, ಪುಸ್ತಕದ್ ಕೊನೆ ಪುಟದಲ್ ಗೀಚೋರ್ ಇನ್ನೊಂದ್ ಕಡೆ
ಕಟ್ತೀವಿ ಪೆನ್ನು ಇಂಕಿಂದ ಕಂದಾಯ, ಇದುವೇ ನಮ್ಮ ಕವಿಗಳ ಸಮುದಾಯ
ಹಾಗೆ ಅಪ್ಪ ಅಮ್ಮನ ಪ್ರೀತಿ ವಾತ್ಸಲ್ಯ
ಮರೆಯಲಾಗದ್ ಕ್ಷಣಗಳ್ನ ವರ್ಣಿಸೋರ್ ಒಂದ್ ಗುಂಪಾದ್ರೆ
ತಮಿಗ್ ಇಷ್ಟಾ ಆದೋರ್ನ , ಜೀವನ ಸಂಗಾತಿ ಆಗೋರ್ನ,
ಮೆಚ್ಸೋಕೆ ಬರ್ದೇ ಇರೋ ಕವನ ಬರ್ಯಕ್ ಒದ್ದಾಡೋರ್ ಒಂದ್ ಗುಂಪು
ಕಟ್ತೀವಿ ಪೆನ್ನು ಇಂಕಿಂದ ಕಂದಾಯ, ಇದುವೇ ನಮ್ಮ ಕವಿಗಳ ಸಮುದಾಯ
ನಮ್ಗೇನ್ ಬೇಡ ಗ್ರಂಥಗಳ ಜ್ಞಾನ, ನಮ್ಗೇನ್ ಬೇಡ ಪೆನ್ನು ಬುಕ್ಕು ಇನ್ನ
ಮಾತಲ್ಲೇ ಮೂಡ್-ಸ್ತೀವಿ ಕವನ, ನಿಂತಲ್ಲೇ ನಗಸ್ತೀವಿ ಜನ್ರನ್ನ
ಮನ್ಸು ರೂಪಿಸುವುದು ಭಾವನೆಗಳಿಂದ ಪದಗಳ ಸಂಚು
ಆಟೋ ಡ್ರೈವರ್, ಫಿಲ್ಮ್ ಸಾಹಿತಿ, ಪೀ.ಟಿ ಮಾಸ್ಟರ್, ವಿದ್ವಾನ್ ಶಾಸ್ತ್ರಿ,
ಕವಿ ಅಂದ್ಮೇಲ್ ಇರದೇ ಪದಗಳ ಜೋಡ್ಸೊ ಹುಚ್ಚು.
ಕಟ್ತೀವಿ ಪೆನ್ನು ಇಂಕಿಂದ ಕಂದಾಯ, ಇದುವೇ ನಮ್ಮ ಕವಿಗಳ ಸಮುದಾಯ
ಮುಂಚಿಂದ ಯಾರೂ ಕೊಡ್ಲಿಲ್ಲ ಪ್ರೋತ್ಸಾಹ, ಯಾರೂ ಆಗ್ಲಿಲ್ಲ ಸ್ಪೂರ್ತಿ
ಯಾರ್ದೋ ಹಾಡು, ಯಾರ್ದೋ ಸಾಲು ತಿರಚೀನೆ ಮೊದಲ ಕವಿತೆ ಆಯ್ತು ಪೂರ್ತಿ
ಅನಿಸುತಿದೆ ಯಾಕೋ ಇಂದು, ಮಿಂಚಾಗಿ ನೀನು ಬರಲು, ಹಾಡುಗಳಾದವು ಮಾರ್ಗ
ಕ್ವೆಸ್ಚನ್ ಪೇಪರ್, ಪಾಮ್ಫ್ಲೇಟ್ ಹಿಂದೆ ಬರೆದ ಕವನಗಳು ತಂದವು ಇಹ ಲೋಕದಲ್ಲೇ ಸ್ವರ್ಗ
ಕಟ್ತೀವಿ ಪೆನ್ನು ಇಂಕಿಂದ ಕಂದಾಯ, ಇದುವೇ ನಮ್ಮ ಕವಿಗಳ ಸಮುದಾಯ
ನೃತ್ಯಕ್ಕೆ, ಸಂಗೀತಕ್ಕೆ ಕೊಡ್ತಾರೆ ಜನ್ರು ವರ್ಷಗಳ ಅಭ್ಯಾಸ
ಆದ್ರೆ ಕವಿಯೊಬ್ಬ ಗುಂಪಲ್ಲಿದ್ರೆ ಸಿಗಲ್ಲ ಕವಿತೆಗೆ ಒಂದೂ ನಿಮ್ಷದ ವಿನ್ಯಾಸ
ನಮ್ಗೂ ಗೊತ್ತು ನಮ್ಗಿರೊ ಕಲೆಗೆ ಬೇಡ ಅಭ್ಯಾಸ, ನಮ್ಗೆ ಬರಿಯೋದು ಹವ್ಯಾಸ,
ಆದ್ರೆ ಕೇಳಿದ್ ತಕ್ಷ್ಣ ಕವಿತೆ ಹೇಳಕ್ಕೆ ಸಿಗಲ್ಲಪ ಪ್ರಾಸ, ನಾವ್ಗಳಲ್ಲ ವ್ಯಾಸ
ಕಟ್ತೀವಿ ಪೆನ್ನು ಇಂಕಿಂದ ಕಂದಾಯ, ಇದುವೇ ನಮ್ಮ ಕವಿಗಳ ಸಮುದಾಯ
ಬರಿತೀವಿ, ಬರಿತಾನೆ ಇರ್ತೀವಿ ಆದ್ರೆ ಎಲ್ರಿಗೂ ಓದಕ್ ಮಾತ್ರ ಕೊಡಲ್ಲ
ಅಕಸ್ಮಾತ್ ಬರಿತಿರ್ವಾಗ ಸಿಕ್ಕೊಂಡ್ರೆ, ಓದಕ್ ಮಾತ್ರ ಬಿಡಲ್ಲ
ಕವಿತೆ ಹೇಳ್ತೀವಿ ಆಗಾಗ, ಹೊಗಳ್ಬೇಕು ಜನ್ರು ನಮ್ನ ಅನ್ನದು ನಮ್ಗೂ ಇದೆ
ಆದ್ರೆ ಹೇಳಾದ್ಮೇಲೆ ಜನ್ರಿಗೆ ಅರ್ಥ ಮಾಡ್ಸೊ ಪಾಡು, ರನ್ನ ಪೊನ್ನರ ಕಾಲದಿಂದ ಇನ್ನೂ ಇದೆ
ಕಟ್ತೀವಿ ಪೆನ್ನು ಇಂಕಿಂದ ಕಂದಾಯ, ಇದುವೇ ನಮ್ಮ ಕವಿಗಳ ಸಮುದಾಯ
ವಿಷ್ಯ ಕೊಟ್ಟು ಬರೀರಿ ಅಂದ್ರೆ ನಡುಗುವುದು ಕಾಲುಗಳು
ವಿಷ್ಯ ಇಲ್ದೆ ಬರೀರಿ ಅಂದ್ರೂ ಬರಲಳುವುದು ಸಾಲುಗಳು
ಸುಮ್ನೆ ಕೂತ್ರೆ ಏನಾದ್ರೂ ಬರಿಬೇಕು ಅನ್ನೋ ಮಿಡಿತ
ಬರಿಯಣ ಅಂತ ಕೂತ್ರೆ ಇರದಿಲ್ಲ ಯೋಚ್ನೆಯಲ್ಲಿ ಹಿಡಿತ
ಕಟ್ತೀವಿ ಪೆನ್ನು ಇಂಕಿಂದ ಕಂದಾಯ, ಇದುವೇ ನಮ್ಮ ಕವಿಗಳ ಸಮುದಾಯ
ಎಲ್ಲಿ ಹೋದವು ವ್ಯಥೆಯಲ್ಲಿ ಗೀಚಿದ ಸಾಲುಗಳು
ಎಲ್ಲಿ ಹೋದವು ನಿಯಂತ್ರಣವ ದೋಚಿದ ಯೋಚ್ನೆಗಳು
ಹಾಳೆಗಷ್ಟೆ ಅರಿವೇ ನಮ್ಮ ಹುಚ್ಚುತನ
ಈ ಅರಿವು ಕವಿತೆಗೆ ಸೀಮಿತವಾಗಿರಲಿ ಎಂಬುದೇ ನಮ್ಮ ಪ್ರಾರ್ಥನ.
ಕಟ್ತೀವಿ ಪೆನ್ನು ಇಂಕಿಂದ ಕಂದಾಯ, ಇದುವೇ ನಮ್ಮ ಕವಿಗಳ ಸಮುದಾಯ
Comments