ಎನ್ನೆದೆಯಿಂದ ದೂರವಾಗಿ
ಎಲ್ಲೋ ಮರುಗಿದೆ
ಸೂಕ್ಷ್ಮ ಜೀವ ಸಾಗಿಸಾಗಿ
ಒಳಗೆ ಕೊರಗಿದೆ..
ಎತ್ತಿಂದೆತ್ತಲೋ ಓಲಾಡುತ್ತಾ
ಗರ್ವವೇ ಮನಸ್ತುಂಬಿದೆ..
ಅಹಂಮ್ಮಿನಲ್ಲಿ ತೇಲಾಡುತ್ತಾ
ಒಂಟಿಯಾಗಿ ಕುಗ್ಗಿದೆ...
ಸಾಗುತ ಸಾಗುತ ಸಾವಿರ ಮೈಲಿ
ತಿಳಿದಿದೆ ಜೀವನವೇ ಬಳ್ಳಿ!
ಹಮ್ಮನು ಕಳೆದು ಜೀವನದಲ್ಲಿ
ಸಾಗಬೇಕು ಆಳಕೆ ಇಲ್ಲಿ...
ನಟ್ಟನಡುವಿನ ಕಲಿಗಾಲದಲಿ
ಮಡಿಯುವ ಮಾತೇಕೆ ಇಲ್ಲಿ?
ಬಾಳಿ ತೋರಿಸು ಒಮ್ಮೆ
ನೀನು ಆದರ್ಶದ ಬದುಕನು
ಕೆಡಕನು ಬಯಸದೆ, ಒಳಿತನು ಮಾಡುತ
ಜೀವನವೇ ಹಾಲು ಜೇನು!
ಒಂದಲೊಂದು ದಿನ ಸೇರಲೆ ಬೇಕು ಮಣ್ಣು
ಏರ್ತಕೆ ಕೇಳುವೆ ಹೊನ್ನು ಹೊನ್ನು!?
ಮನ್ವಂತರದ ಚಿಂತನೆಯಲ್ಲಿ ಚಿಂತನ !!!....
Comments