top of page

ತಲೆಬುಡವಿಲ್ಲ!!!

Abhiram K Bairy

ಈ ತಂಪು ಬಿಸಿಲಿನಲಿ

ಈ ಸುಡುವ ನೆರಳಿನಲಿ

ಎತ್ತ ನೋಡಿದರೂ ನೀರವ ಮೌನ.


ಆಗ ಕೇಳಿದನು ಸೂರ್ಯ

ಏನಾಯಿತು ಓ ಮಗುವೇ?

ನಾ ಉತ್ತರಿಸಿದೆ,

ಕೇಳಿ ಓ ಪ್ರಭುವೆ,

ಗೊಂದಲಮಯ ಯೋಚನೆಗಳು,

ತಲೆಬುಡವಿರದ ಚಿಂತನೆಗಳು,

ಸಾಗರದಂಚನು ಮುಟ್ಟುವ ಬಯಕೆ,

ಆದರೆ ಈ ಜಗತ್ತು ಮೂಡಿಸುವುದು

ನನ್ನಲಿ ಅಪನಂಬಿಕೆ.


ಈ ನಡುವೆ ಅನಿಸುತಿದೆ

ಅವಳೇ ನನ್ನ ಮದನಿಕೆ.

ಹೋಗಿ ಹೇಳಬೇಕೆನಿಸುವುದು,

ನಾ ಅಭಿರಾಮನಾದರೆ ನೀನಾಗು ಎನ್ನಯ ಅಭಿಸಾರಿಕೆ.

ಆದರೆ ಒಂದೇ ಭಯ

ತರುವಳೇನೋ ಹೊಡೆಯಲು ಪೊರಕೆ.


ಸಂತೈಸಿದನು ಸೂರ್ಯ,

ಇರಲಿ ಜೀವನದಲ್ಲಿ ಧೈರ್ಯ

ಆಗುವುದೆಲ್ಲವೂ ಒಳ್ಳೆಯದಕ್ಕೆ

ಕುಗ್ಗಿಸಿಕೊಳ್ಳದಿರು ನಿನ್ನ ಆತ್ಮಸ್ಥೈರ್ಯ.

Comments


  • Instagram

Follow us on Instagram

LitSoc DSI

bottom of page