top of page

ದೀಪಾವಳಿ - ಕತ್ತಲಿನಿಂದ ಬೆಳಕಿನಡೆಗೆ

Prashanth Bhat

ದೀಪಾವಳಿ ಒಂದು ಪ್ರಮುಖವಾದ ಭಾರತೀಯ ಹಬ್ಬ. ಹೆಸರೇ ಸೂಚಿಸುವಂತೆ ಇದು ಬೆಳಕಿನ ಹಬ್ಬ. ರಾಕ್ಷಸರಾಜನಾದ ರಾವಣನನ್ನು ಪರಾಜಯಗೊಳಿಸಿ ಶ್ರೀರಾಮನು ಮರಳಿ ತವರಾದಂತಹ ಅಯೋಧ್ಯೆಗೆ ಹಿಂತಿರುಗಿದ ಪ್ರತೀಕವಾಗಿ ಕೂಡ ಇದನ್ನು ಆಚರಿಸಲಾಗುತ್ತದೆ


ನಮ್ಮ ಭಾರತೀಯ ಪರಂಪರೆಯಲ್ಲಿ ಒಂದು ಮಾತಿದೆ "ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ" ಎಂಬ ಮಾತಿನಂತೆ ನಮ್ಮಲ್ಲಿ ಇರುವ ಅಂಧಕಾರವನ್ನು ತೊಡೆದು ಹಾಕಿ ಅಜ್ಞಾನ ,ಬುದ್ದಿ ,ಆಚಾರ ,ವಿಚಾರಗಳಲ್ಲಿ ಅಂಟಿಕೊಂಡಿರುವ ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಪ್ರಜ್ವಲಿಸು ಎಂದು ದೇವರ ಬಳಿ ವಿನಂತಿಸಿಕೊಳ್ಳುವ ಹಬ್ಬವು ಇದಾಗಿದೆ


ದೀಪಾವಳಿ ಎಂದ ತಕ್ಷಣ ಕಣ್ಣ ಮುಂದೆ ಬರುವುದು ದೀಪ, ಹಣತೆ,ಬೆಳಕು. ಈ ಹಬ್ಬದಲ್ಲಿ ದೀಪ ಮತ್ತು ಬೆಳಕಿಗೆ ಮುಖ್ಯ ಪ್ರಾಮುಖ್ಯತೆ. ಏಕೆಂದರೆ ನಮ್ಮ ಸಂಸ್ಕೃತಿಯಲ್ಲಿ ಯಾವುದೇ ಒಂದು ಕಾರ್ಯವನ್ನು ಶುರು ಮಾಡುವುದೇ ನಂದಾದೀಪವನ್ನು ಬೆಳಗುವ ಮೂಲಕ."ದೀಪದಿಂದ ದೀಪವ,ಹಚ್ಚಬೇಕು ಮಾನವ"ಎಂಬ ಮಾತಿನಂತೆ ದೀಪಗಳನ್ನು ದೀಪದ ಮೂಲಕವೇ ಬೆಳಗುತ್ತೇವೆ


ಇತಿಹಾಸ ಪುರಾಣಗಳ ಪ್ರಕಾರ ಕೂಡ ಇದು ಒಂದು ಬಹುಮುಖ್ಯ ಹಬ್ಬ . ಭಗವಂತ ಶ್ರೀ ರಾಮನು ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಮರಳಿ ಬಂದನು. ಇದರಿಂದ ಸಂತೋಷದಿಂದ ಮಿಂದಿದ್ದ ಪ್ರಜೆಗಳು ಸಂಭ್ರಮ ಸಡಗರವನ್ನು ಆಚರಿಸಲು ಬೀದಿಗಳು,ಮನೆಗಳನ್ನು ಎಣ್ಣೆ ದೀಪಗಳಿಂದ ವಿಜ್ರಂಭಣೆಯಾಗಿ ಅಲಂಕರಿಸಿದರು. ಅಂದಿನಿಂದ ಇಂದಿನವರೆಗೂ ಇದೇ ಸಂಪ್ರದಾಯ ಮುಂದುವರಿದು ಬಂದಿದೆ. ಹಾಗೂ ಅಮವಾಸ್ಯೆಯಂದು ಮಹಾಲಕ್ಷ್ಮಿಯನ್ನು ಆರಾಧಿಸುವ ಸಂಪ್ರದಾಯ ಕೂಡ ಮುಂದುವರೆದು ಬಂದಿದೆ.


ಸದಾ ಕೆಟ್ಟದರ ವಿರುದ್ಧ ಒಳ್ಳೆಯದೇ ಗೆಲ್ಲುತ್ತದೆ, ನಾವು ನಮ್ಮಲ್ಲಿರುವ ಕತ್ತಲೆಯನ್ನು ತೊಡೆದು ಹಾಕಬೇಕು ಎಂದು ನಮಗೆ ಈ ಹಬ್ಬವು ಕಲಿಸುತ್ತದೆ.ಎಲ್ಲರಲ್ಲಿರುವ ಕತ್ತಲನ್ನು ದೂರ ಮಾಡಿ ಬೆಳಕನ್ನು ತರಲಿ ಎಂದು ಆಶಿಸುತ್ತಿದ್ದೇನೆ.ಹಾಗು ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು


Commenti


  • Instagram

Follow us on Instagram

LitSoc DSI

bottom of page