top of page
Abhiram Ramnarayan Aithal

ಪುಸ್ತಕ ವಿಮರ್ಶೆ: ಕರ್ವಾಲೊ - ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಕೆ.ಪಿ.ಪೂರ್ಣಚಂದ್ರ ತೇಜಸ್ವಿರವರು ಬರೆದಿರುವ ಹಲವಾರು ಕಾದಂಬರಿಗಳಲ್ಲಿ ಇದು ಒಂದು.ಇದು ಕರ್ವಾಲೋ ಎಂಬ ವಿಜ್ಞಾನಿಯೂ ಹಾರುವ ಓತಿಯನ್ನು ಬೆನ್ನು ಹತ್ತಿದ ಕಥೆ.


ಈ ಕಥೆಯಲ್ಲಿ ತೇಜಸ್ವಿಯವರದು ಒಂದು ಪಾತ್ರ. ಅವರ ಜೀವನದಲ್ಲಿ ನಡೆದ ಸಂಗತಿಯನ್ನು ತುಂಬಾ ಸುಂದರವಾಗಿ ಓದುಗರ ಮುಂದೆ ಇಟ್ಟಿದ್ದಾರೆ .ಅವರ ಜೊತೆಗೆ ಮಂದಣ್ಣ ಒಬ್ಬ ಹಳ್ಳಿಗ ಮತ್ತು ಕರ್ವಾಲೋ ಒಬ್ಬ ವಿಜ್ಞಾನಿ ಇವರಿಬ್ಬರದು ಪ್ರಮುಖ ಪಾತ್ರವಾಗಿದೆ.


ಅತ್ಯಂತ ಸ್ಪಷ್ಟವಾಗಿ ಹೇಳಲಾದ ಈ ಕಥೆ ಕುತೂಹಲ ಮೂಡಿಸುವುದರಲ್ಲಿ ಸೋಲುವುದಿಲ್ಲ. ಅಕಸ್ಮಾತಾಗಿ ಪರಿಚಯವಾಗಿ ಒಬ್ಬರೊಬ್ಬರ ನಡತೆ ನಡವಳಿಕೆಯ ಅರಿತು, ಕಷ್ಟದಲ್ಲಿದ್ದಾಗ ಸಹಾಯ ಹಸ್ತವ ಚಾಚಿ, ಅವರ ಬಾಂಧವ್ಯದ ಬಗ್ಗೆ ಕೆಟ್ಟದನ್ನು ಮಾತನಾಡಿದವರೇ ಪಾಪಿಗಳು.


ನಡು ನಡುವೆ ಪ್ಯಾರ ಹಾಗೂ ಮಂದಣ್ಣನ ಮಾತುಗಳು ಕೇಳಿದರೆ ಸಾಕು ಓದುಗರಿಗೆ ಮನೋರಂಜನೆ ನೀಡುತ್ತದೆ. ಮಂದಣ್ಣನ ಮದುವೆಯಂತೂ ಮರೆಯಲು ಸಾಧ್ಯವಿಲ್ಲ. ಅದರ ಜೊತೆ ಕಿವಿ, ಎಂಗ್ಟ ಹಾಗೂ ಕರಿಯಪ್ಪನ ಜಗಳ, ಕೋರ್ಟ್ ಕೇಸು, ಪ್ರಭಾಕರ ಇವೆಲ್ಲ ಸಂಗತಿ ಹಾಗೂ ಪಾತ್ರಗಳು ಅದ್ಭುತವಾಗಿ ಮೂಡಿ ಬಂದಿದೆ


ಮಲೆನಾಡಿನ ಜೀವನ,ನಿರೂಪಕರ ಸಹಜಭಾಷೆ, ಜೇನು ಸಾಕಾಣಿ, ಬೇಟೆಯಲಿ ಕಿವಿಯ ಉತ್ಸಾಹ ,ಕಳ್ಳಬಟ್ಟಿ ಸಾಗಾಣಿಕೆ ಸ್ವಲ್ಪ ರಸಿಕತೆ, ಅಲ್ಲಿನ ಜನಪದ ಶೈಲಿ ಇವೆಲ್ಲವೂ ಓದುಗರ ಆಸಕ್ತಿಯನ್ನು ಎತ್ತಿ ಹಿಡಿಯುತ್ತದೆ.


ದಟ್ಟ ಕಾಡಿನ ಬಗ್ಗೆ ಅರಿವಿಲ್ಲದಿದ್ದರೆ ಕರ್ವಾಲೊ ಪುಸ್ತಕವ ಓದಿದರೆ ಸಾಕು. ಮೊದಲ ಪುಟದಿಂದ ಕೊನೆಯ ಪುಟದವರೆಗೂ ಓದಿಸಿಕೊಂಡು ಹೋಗುತ್ತದೆ .ಕೊನೆಗೆ ದಟ್ಟವಾದ ಅರಣ್ಯದಲ್ಲಿ ನಡೆಯುವ ಸಂಗತಿಗಳಂತೂ ಓದುಗರಿಗೆ ರೋಮಾಂಚನ ಮೂಡಿಸುತ್ತದೆ.


ಭೂಮಿಯಲ್ಲಿರುವ ಇನ್ನೊಂದು ಜೀವ ಜಗತ್ತಿನ ಕುರಿತು ಸಂಶೋಧನೆ ಮಾಡಲು ಹೊರಟಾಗ ಅದು ನಿಮಗೆ ಹುಚ್ಚಾಟವೆನಿಸಬಹುದು. ಆದರೆ ಆ ಹುಚ್ಚಾಟವೇ ಅವರಿಗೆ ಗುರಿ ತಲುಪಲು ಸಹಾಯವಾಗುತ್ತದೆ. ಅಂದರೆ ಕರ್ವಾಲೋ ಕೊನೆಗೆ ಅವರ ಸ್ನೇಹಿತರ ದೆಸೆಯಿಂದ ಹಾರುವ ಓತಿಯನ್ನು ಕಂಡುಹಿಡಿಯುವುದರಲ್ಲಿ ಯಶಸ್ವಿಯಾಗುತ್ತಾರೆ.


ಕೃತಿ:ಕರ್ವಾಲೊ

ಪ್ರಕಟಣೆ:ಪುಸ್ತಕ ಪ್ರಕಾಶನ, ಮೈಸೂರು

ರೇಟಿಂಗ:4.5/5

ಪಟ ಸಂಖ್ಯೆ:146

ಕ್ಲೀಷತೆ:ಸುಲಭ

Comments


bottom of page