ದಾನವೊ, ಧ್ಯಾನದಿಂದವೋ
ತಂತ್ರಜ್ಞಾನದ ಈ ವರವೂ
ಸಾಧನವೋ ಸಾಧನೆಗೈಯುವುದೋ ನನ್ನಲ್ಲಿಹುದು-ಬೆಪ್ಪ
ಕುಣಿಯುವ ಯಂತ್ರ ತಂದೆ,
ದುರಸ್ತ ಕೈಯಲ್ಲಿತ್ತುಕೊಂಡೆ ಸರ್ವತ್ರನೆಂಬ ಕನಸು ಕಂಡೆ-ಬೆಪ್ಪ
ತೋಡಿಬರದ ನೀರ,ನಲ್ಲಿಯಲಿ ತಂದೆ, ಮಾಸಹುರುಳಿದ ಸಂದೇಶ
ಕ್ಷಣಗಳಲ್ಲಿ ಕಂಡೆ, ಪಾರಂಗತನೆಂಬ ಬಿರುದು ನಿ ಕೊಂಡೆ- ಬೆಪ್ಪ
ಇರುಳ ಚಂದ್ರನ ನಾಚಿಸುವ ಬೆಳಕು ತಂದೆ, ಭೂವಿಯ ತೊರೆದು ಬೇರೊಂದು ಜಗವ ಹುಡುಕುತ ಹೊರಟೆ- ಬೆಪ್ಪ
ನನ್ನಲ್ಲಿಹಿವುದ ಜ್ಞಾನ ಯಂತ್ರಗಳಿಗೆ ಕೊಟ್ಟೆ, ಬದುಕ ನಡೆಸಲು ಬಿಟ್ಟು , ಮರಿಹೋಗಿ ನೋಡುತ ಕೂತೆ-ಬೆಪ್ಪ
ಹರನ ಸೃಷ್ಟಿಯೊಳು ,ಕೃತಕ ಬುದ್ಧಿಮತ್ತೆಗಳ ಸವಾಲು
ಗೆಲ್ಲಬಹುದೇ ದಿಟವಾಗಿ ನಾ -ಬೆಪ್ಪ
ಮಣ್ಣಾಗುವ ಮುನ್ನ ,ತನು ಮನವ ಸೇರು , ಯಂತ್ರಗಳ ಎಷ್ಟಿದ್ದರೂ ಜೀವನ ಮನಕುಲವ ಜೊತೆ ಮರೆಯಬೇಡ ನೀ ನನ-ಬೆಪ್ಪ
留言