top of page
Chiranjeeth U S

ಬೆಳದಿಂಗಳಾಗಿ ಬಾ...

ಸೆರಗ ಹೊದ್ದು ಮಲ್ಲಿಗೆ ಮುಡಿದು

ಮೃದು ನಗುವ ಬೀರೊಮ್ಮೆ,

ಜಲ್ಲೆನಬಹುದೇನೋ ಮಗು ಹೃದಯ ಮತ್ತೊಮ್ಮೆ.


ಬಿಟ್ಟು ಬಿಡದೆ ಬೇಕೆನಿಸುವ

ಹುಚ್ಚು ಹುಡುಗನ ಬಯಕೆ ನೀನು ,

ದೂರ ದೂಡಿದರು ,ಮುದುಡಿ ಮರಳುವ

ಬೇಡಾದ ಬಯಕೆ ನಾನು.


ಹಗಲಿರಲಿ ಇರುಳಿರಲಿ ನಿನ ಕನಸೆ ಕಾಣುವೆ

ನನಸಾಗಿ ಬರಬಾರದೆ ಓ ನನ್ನ ಪ್ರಾಣವೇ ,

ಸರಿ ಹೊತ್ತಿಗೆ ಸೃಜಿಸಿದ, ಶೃಂಗಾರ ಸಾರವೇ

ಜಗಕೆ ಜನ್ಮ ಕೊಡುವ ನಿನಗೆ ನಾನೊಂದು ಭಾರವೆ.


ನೀ ಅಡಿ ಇಡುವಲ್ಲಿ ಎನ್ನ ಮುಡಿ ಇಡುವೆ

ನವಿಲೇ, ನಾಚುವಂತೆ ಬಾ.

ನಿನ ಹುಡುಕೋ ಬರದಲ್ಲಿ ನಾ ಕುರುಡನಾಗಿರುವೆ

ಎನಾದರಾಗಲಿ ಬೆಳದಿಂಗಳಾಗಿ ಬಾ...


14 views

Commenti


bottom of page