top of page

ಬಣ್ಣಗಳಬ್ಬ - ಹೋಳಿ ಹುಣ್ಣಿಮೆ

Shivabasava

ಬಣ್ಣ ಎರಚುವ, ಭೇದ ತೊರೆಯುವ

ಪ್ರೀತಿ ಬೆರೆಸುತ, ಬಿನ್ನಮುರಿಯು

ಜಾತಿ ಮತವ ಹಂಗು ತೊರೆದು,ಬನ್ನಿ ಬಣ್ಣ ಎರಚುವ


ದುರ್ಗುಣಗಳ ಅಡಿಯಲ್ಲಿಟ್ಟು, ಸಜ್ಜನಿಕೆಯ ಬೇರನೆಟ್ಟು

ಉಸಿರ ಹಸಿರನೆಚ್ಚಿಸುತ, ಏಕತೆಯ ಭಾವ ಸಾರುತ

ಕೀಟಗಳ ಭಯವ ಮುರಿದು, ಬನ್ನಿ ಬಣ್ಣ ಎರಚುವ.


ನೆರೆಹೊರೆಯವರಿಗೆ ಸಿಹಿ ಹಂಚುತ, ಬಾಂಧವ್ಯದ ಬಿಗಿದಪ್ಪಿ ಕೊಳ್ಳುವ

ನಮ್ಮೊಳಗಿರುವ ಕಾಮಣ್ಣನ ಸುಡುತ, ಶಿವನಾಚಾರಗಳು ಅಳವಡಿಸುವ ,

ದುಷ್ಟ-ದುಷ್ಕೃತ್ಯದಿ ದೂರ ಸರಿದು, ಬನ್ನಿ ಬಣ್ಣ ಎರಚುವ


ಹಲವು ಮನಗಳ ಕಾಮನಬಿಲ್ಲಿದು, ಕೂಡಿದ ಶ್ವೇತವೇ ಮಾನವ ಕುಲವು

ಸಕಲ ಜೀವಿಗಳು ಒಂದೇ ಎನ್ನುತ, ಜಗಮಗ ಸಾರುವ ಹಬ್ಬವಿದು,

ಬವಣೆಗಳ ರೇಖೆ ಬಿಡಿಸಿ, ಬನ್ನಿ ಬಣ್ಣ ಎರಚುವ.


ಬನ್ನಿ ಬಣ್ಣ ಎರಚುವ, ಕೂಡಿ ಆಡಿ ನಲಿಯುವ..


Comments


  • Instagram

Follow us on Instagram

LitSoc DSI

bottom of page