top of page
Sinchana S Bhat

ಭೂತಾರಾಧನೆ

ಭಾರತದ ಅನೇಕ ಜನಪದ ಆರಾಧನಾ ಪರಂಪರೆಗಳಲ್ಲಿ ತುಳುನಾಡಿನ ‘ಭೂತಾರಾಧನೆ’ ಕೂಡ ಒಂದು . ಇದನ್ನು ‘ದೈವಾರಾಧನೆ‘ ಎಂದೂ ಕರೆಯುತ್ತಾರೆ . ಇದು ಕರ್ನಾಟಕದ ಪಶ್ಚಿಮ ಕರಾವಳಿಯ ಇಂದಿನ ಉಡುಪಿ ಜಿಲ್ಲೆ , ದಕ್ಷಿಣ ಕನ್ನಡ ಜಿಲ್ಲೆ , ಇಂದು ಕೇರಳಕ್ಕೆ ಸೇರಿರುವ ಕಾಸರಗೋಡು ಜಿಲ್ಲೆಯ ಭೂ ಪ್ರದೇಶಗಳಲ್ಲಿ ಈ ಆರಾಧನಾ ಪ್ರಕಾರ ಹರಡಿಕೊಂಡಿದೆ.

‘ಭೂತ’ ಎಂಬ ಪದಕ್ಕೆ Devil,Ghost,Demon ಎಂಬಿತ್ಯಾದಿ ಅರ್ಥಗಳಿವೆಯಾದರೂ ತುಳುವರು ಪರಂಪರೆಯಿಂದ ಆರಾಧಿಸಿಕೊಂಡು ಬಂದ ಭೂತಗಳನ್ನು ‘ದೈವೀಕ ಶಕ್ತಿ’ ಗಳು ಎಂದು ನಂಬಲಾಗಿದೆ . ಇವು ನಂಬಿದವರಿಗೆ ಒಳಿತನ್ನು ಉಂಟುಮಾಡುವ , ನಂಬದವರಿಗೆ ಕೇಡನ್ನು ಬಗೆಯುವ ನೆಲದ ಶಕ್ತಿಗಳು ಎಂದು ತಿಳಿಯಲಾಗಿದೆ . ಹಾಗಾಗಿ ತುಳು ಆರಾಧನಾ ಪರಂಪರೆಯಲ್ಲಿ ಭೂತ ಮತ್ತು ದೈವ ಬೇರೆ ಬೇರೆಯಲ್ಲ . ಎರಡೂ ಒಂದೇ .ತುಳುನಾಡಿನ ಭೂತಗಳು ‘Evil Spirit ’ ಗಳಲ್ಲ . ಅವು ‘Protective Spirit’ ಗಳು.

ಇದೊಂದು ಧಾರ್ಮಿಕ ರಂಗಭೂಮಿಯೂ ಆಗಿದ್ದು ಕಾಲಾನುಕ್ರಮದಲ್ಲಿ ಇದರಲ್ಲಿ ಆರಾಧನಾಂಶ , ಕಲಾತ್ಮಕಾಂಶ , ಮನೋರಂಜಕಾಂಶ , ನ್ಯಾಯ ವಿತರಣಾಂಶ ಇತ್ಯಾದಿಗಳು ಸೇರ್ಪಡೆಗೊಂಡು ಇದೊಂದು ಸಂಕೀರ್ಣ ವ್ಯವಸ್ಥೆಯಾಗಿ ಬೆಳೆದು ಬಂದಿದೆ . ಭೂತಾರಾಧನೆಯ ಸಾರ್ವಜನಿಕ ಪ್ರದರ್ಶನವು ಹೆಚ್ಚಾಗಿ ರಾತ್ರಿಯ ವೇಳೆ ನಡೆಯುತ್ತದೆ. ಮಂದ ಬೆಳಕು , ಕತ್ತಲೆಯ ಹಿನ್ನೆಲೆ , ನಿದ್ದೆಗೆಟ್ಟು ನೋಡುವ ಜನರು , ಗದ್ದೆಯಂತಹ ಬಯಲು ಪ್ರದೇಶ ಮುಂತಾದ ಅಂಶಗಳು ಭೂತಾರಾಧನೆಗೆ ಒಂದು ಬಗೆಯ ಅಪಾರತೆಯನ್ನು ತಂದುಕೊಟ್ಟು, ಹೊಸ ಜಗತ್ತನ್ನು ಕಟ್ಟಿ ಕೊಡುತ್ತದೆ . ಆರಾಧನೆಯ ಸಂದರ್ಭದಲ್ಲಿ ಬಳಸಲಾಗುವ ಬಣ್ಣ , ವೇಷಭೂಷಣಗಳು , ಆಯುಧಗಳು , ಧಾರಣೆಯ ವಸ್ತುಗಳು, ಭೂತ ಕುಣಿಯುವ ಶೈಲಿ ಮತ್ತು ಅವುಗಳು ತೋರಿಸುವ ಅಟ್ಟಹಾಸ , ಅಬ್ಬರದ ಹಿಮ್ಮೇಳ ಇವು ಕೂಡ ಭೂತಗಳ ಅಲೌಕಿಕಯನ್ನು ಇನ್ನಷ್ಟು ಹೆಚ್ಚಿಸುತ್ತವೆ.

ಭೂತಾರಾಧನೆಯ ಬಗೆಗಳು:

ಕೆಂಡಸೇವೆ

ಕೋಲ

ಜಾಲಾಟ

ನೇಮ

ಧರ್ಮನೇಮ

ಬಂಡಿಜಾತ್ರೆ

ಮೈಮೆ

ಮೆಚ್ಚಿ

ದರ್ಶನ

ಮಾಣಿಚ್ಚಿಲ್


ಪಾಡ್ದನಗಳು ಭೂತಗಳ ಹುಟ್ಟು, ಪ್ರಸರಣ, ಕಾರಣಿಕವನ್ನು ನಿರೂಪಣೆ ಮಾಡುವ ಪದ್ಯರೂಪದ ಕಥನಕವನಗಳು. ಪಾಡ್ದನವನ್ನು ತುಳುವರು ಪಾರ್ತನೊ, ಸಂದ್, ಸಂದಿ, ಹೀಗೆ ಬೇರೆಬೇರೆ ರೂಪದಲ್ಲಿ ಬಳಕೆ ಮಾಡುತ್ತಾರೆ.

ಭೂತಾರಾಧನೆಯ ಪರಿಕಲ್ಪನೆಯನ್ನು ಮತ್ತು ಅದರಲ್ಲಿ ಬರುವ ಎಷ್ಟೋ ಘಟನೆಗಳನ್ನು ವಾಸ್ತವ ಎಂದು ತಿಳಿದುಕೊಳ್ಳಬೇಕಾಗಿಲ್ಲ. ಅದರ ಸಂದೇಶವೇನು ಎಂದು ತಿಳಿದುಕೊಳ್ಳುವುದು ಮುಖ್ಯ.


ಆರಾಧನೆ ಹೊಂದುವ ಭೂತಗಳ ಇತಿಹಾಸವನ್ನು , ಅಲೌಕಿಕ ನೆಲೆಯಲ್ಲಿ ಆರಾಧನೆ ನಡೆಸುವ ಜನರ ಮನೋಧರ್ಮ , ಕಲಾತ್ಮಕ ಅಭಿವ್ಯಕ್ತಿಯ ರೂಪದಲ್ಲಿರುವ ಒಂದು ವೇಷವನ್ನು ಭೂತ/ ದೈವ ಎಂದು ಒಪ್ಪಿಕೊಳ್ಳುವ ಮನೋಭಾವ – ಇವುಗಳ ಹಿನ್ನೆಲೆಯಲ್ಲಿ ‘ಭೂತ’ ಶಬ್ದದ ಅರ್ಥವನ್ನು ಸಾಂಸ್ಕೃತಿಕವಾಗಿ ಪರಿಭಾವಿಸ ಬೇಕಾಗಿದೆ



49 views

Comments


bottom of page