top of page
Trupthi

ಭೂಮಿಯೆಂಬ ಬಾಡಿಗೆ ಮನೆ!

ಅಮ್ಮ! ಹಸಿವು ಎಂದಾಗ ಅನ್ನ ನೀಡಲಾಗದವಳೋ

ಇಲ್ಲ ಕೈ ತುತ್ತು ನೀಡಲು ಸಮಯವಿಲ್ಲದವಳೋ,

ಮಗಳಿಗೆ ಚಂದಾಮಾಮ ತೋರಿಸಿ ಆನಂದಿಸೊ ಮೂಖನೋ

ಇಲ್ಲ ಆ ಹಲ್ಲಿಲ್ಲದ ಮುಗ್ದ ನಗು ನೋಡಲು ಸಮಯವಿಲ್ಲದೆ ಕಾರ್ಯನಿರತನೋ...


ಯಾರೋ ಬಡವ ಈ ಭೂಮಿಯಲಿ

ಎಲ್ಲರೂ ಬಾಡಿಗೆದಾರರು ಇಲ್ಲಿ!


ಅಂಧಕಾರದಲ್ಲೂ ಬಣ್ಣಗಳ ಕಾಣುವ ಅಂಧನೋ,

ಇಲ್ಲಾ ಎಲ್ಲೆಲ್ಲೂ ಕಪ್ಪು ಕಲೆಯನ್ನೇ ಹುಡುಕುವವನೋ,

ಎಲ್ಲರನ್ನೂ ಪ್ರೀತಿಯಿಂದ ಕಾಣುವವನೋ,

ಇಲ್ಲಾ ಗುಡಿಗೋಪುರ ಸುತ್ತುವವನೋ,


ಯಾರೋ ಬಡವ ಈ ಭೂಮಿಯಲಿ

ಎಲ್ಲರೂ ಬಾಡಿಗೆದಾರರು ಇಲ್ಲಿ!


ಎಲ್ಲರಿಗೂ ನಂಟು ಉಂಟು ಈ ಬಡತನದೂಂದಿಗೇ

ಪರಿಹಾರವೂ ನಮ್ಮಲ್ಲೇ ಉಂಟು ಅದರ ನಿರ್ಮೂಲನೆಗೆ

ಯಾರೋ ಬಡವ ಈ ಭೂಮಿಯಲಿ

ಎಲ್ಲರೂ ಬಾಡಿಗೆದಾರರು ಇಲ್ಲಿ!

23 views

Comments


bottom of page