top of page
  • Hemanth H R Malnad

ಭಾರತದ ಆರ್ಥಿಕ ಸ್ಥಿತಿಯ ಸೂಕ್ತ ಸೂತ್ರ

ನಾವು ಭಾರತೀಯರು, ನಮ್ಮ ದೇಶ ಹಲವಾರು ಸವಾಲುಗಳನ್ನು ಇಲ್ಲಿಯತನಕ ಎದುರಿಸಿ ಹಿಂದಿನ ಕಷ್ಟಕರ ಪರಿಸ್ಥಿತಿಗಳನ್ನು ಮೀರಿ ನಿಂತಿದ್ದೇವೆ, ಜೊತೆಗೆ ಒಂದು ನೂತನ ಸಮಾಜವನ್ನು ಕಟ್ಟಲು ಆರಂಭಿಸಿದ್ದೇವೆ. ಪರದೇಶಗಳಿಂದ ಮುಘಲರು, ಬ್ರಿಟಿಷರು, ಪೋರ್ಚುಗೀಸರು ಇನ್ನು ಹಲವಾರು ದಾಳಿಗಳ, ಬಂಧನಗಳ ನಂತರ ನಮ್ಮ ದೇಶದ ಸಹಾಯಕ ಸ್ವಭಾವವನ್ನು ದುರುಪಯೋಗಿಸಿ, ಅಸಹಾಯಕನನ್ನಾಗಿ ಹಾಗೂ ಹೀನಾಯರನ್ನಾಗಿ ಮಾಡಿದರು. ಎಲ್ಲದಕ್ಕಿಂತ ಬ್ರಿಟಿಷರು ಆಳಿದ ಆ ಕಾಲ ಇಡೀ ದೇಶವನ್ನು ತತ್ತರಿಸಿತು. ೧೮೦೦ರಲ್ಲಿ ದೊಡ್ಡ ಸ್ವಿಂಗ್ ಮತ್ತು ಮುಘಲ್ ಸಾಮ್ರಾಜ್ಯದ ಜಿಡಿಪಿಯು ಶೇಕಡ 60ರಷ್ಟು ವಿಶ್ವದ ಜಿಡಿಪಿ ಆಗಿತ್ತು. ಮುಘಲ್ ಭಾರತದ ಜಿಡಿಪಿಯು ಶೇಕಡ 23ರಷ್ಟು ಉಳಿದಿತ್ತು. ಬಿಟಿಷರು ನಮ್ಮ ದೇಶ ತೊರೆದು ಹೋದಾಗ ೧೯೪೭ರ ಸಂದರ್ಭದಲ್ಲಿ ಭಾರತದ ಜಿಡಿಪಿಯು ಕೇವಲ 4ರಷ್ಟು ಇಳಿದಿತು. 2019ರಲ್ಲಿ ಭಾರತದ ಜಿಡಿಪಿ 20ರಷ್ಟು ವಿಶ್ವದ ಜಿಡಿಪಿಯಲ್ಲಿ ಭಾಗಿಯಾಗಿದೆ. ಚೀನಾ ದೇಶಕ್ಕೆ ಹೋಲಿಸಿದರೆ ಪ್ರಜಾಪ್ರಭುತ್ವ ಇಲ್ಲದೆ, ಸಮ್ಮತವಾದ ಸರ್ಕಾರವನ್ನೇ ಚಾಲನೆಯಲ್ಲಿಟ್ಟು, ಅದಕ್ಕೆ ತನ್ನದೇ ಆದಂತಹ ಬಂಡವಾಳ ಹಾಗೂ ಮುಕ್ತ ಮಾರುಕಟ್ಟೆಯನ್ನು ತೆಗೆದುಕೊಂಡು 1980 ರಲ್ಲಿ ತಮ್ಮ ಜಿಡಿಪಿಯನ್ನು 3.9 ಇಂದ 18.4 ಅಷ್ಟು ಏರಿಸಿದೆ. ಇದಕ್ಕೆ ಹೋಲಿಸಿದರೆ ನಮ್ಮ ದೇಶದಲ್ಲಿ ಉದಾರಿಕರಣ ಬಂದದ್ದು ೧೯೯೧ಅಲ್ಲಿ. ಹೀಗಾಗಿ ನಮ್ಮ ದೇಶ ಆರ್ಥಿಕವಾಗಿ ಬೆಳೆಯುತ್ತಿಲ್ಲ ಎಂದು ನಿರ್ಣಯಿಸುವುದು ತಪ್ಪು ಹಾಗೂ ಪ್ರಗತಿಯ ದಾರಿಯಲ್ಲಿ ಇನ್ನು ಸಾಗಬೇಕೆಂದು ಹೇಳುವುದೇ ಸೂಕ್ತ.


ಇನ್ನು ಆರ್ಥಿಕವಾಗಿ ಬೆಳೆಯಲು ನಮ್ಮ ದೇಶವು ಹಲವಾರು ಸವಾಲುಗಳನ್ನು ಮತ್ತು ಕಠಿಣವಾದ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಇದರಲ್ಲಿ ಮುಖ್ಯವಾದ ಅಡ್ಡಿಗಳು ಜನಸಂಖ್ಯೆ, ಬಡತನ ಹಾಗೂ ಅನಕ್ಷರತೆ. ಈ ಮೂರು ಅಂಶಗಳು ದೇಶದ ಆರ್ಥಿಕ ಪರಿಸ್ಥಿತಿಯ ಕುಂಟತನಕ್ಕೆ ಕಾರಣವಾಗಿದೆ. ಈ ಕ್ಷೇತ್ರಗಳಲ್ಲಿ ಭಾರತ 20 ನೇ ಶತಮಾನದಿಂದ ಬಹಳವೇ ಅಭಿವೃದ್ಧಿಯಾಗಿದೆ ಆದರೂ ಈ ಸವಾಲುಗಳನ್ನು ಸಂಪೂರ್ಣವಾಗಿ ಸುಧಾರಿಸಲು ಭಾರತ ಎರಡು ಹೆಜ್ಜೆ ಹಿಂದೆ ಇದೆ. ನಮ್ಮ ದೇಶದ ಈಗಿನ ಅಕ್ಷತಾ ಸಂಖ್ಯೆ ಶೇಕಡ 69.3%, ದೇಶಕ್ಕೆ ಸ್ವತಂತ್ರ ದೊರಕಿದಾಗ ದೇಶದ ಅಕ್ಷರತೆ ಶೇಕಡ 12%. ಇಂತಹ ಸಂಖ್ಯೆಗಳಿಗೆ ಹೋಲಿಸಿದರೆ ಭಾರತ ಇಂತಹ ಕ್ಷೇತ್ರದಲ್ಲಿ ಬಹಳವೇ ದೂರದ ಮೈಲುಗಲ್ಲುಗಳನ್ನು ಮೀರಿದೆ. ಆದರೆ ಮುಂದುವರೆದ ದೇಶಗಳಿಗೆ ಹೋಲಿಸಿದರೆ ಇದರ ಸಂಖ್ಯೆ ಬಹಳವೇ ಕನಿಷ್ಠ. ಶಿಕ್ಷಣಕ್ಕೆ ಗ್ರಾಮೀಣ ಭಾಗಗಳಲ್ಲಿ ಹಾಗೂ ಮಹಿಳೆಯರ ಒಳಿತಿಗಾಗಿ ಬಹಳ ಒತ್ತಡ ನೀಡಬೇಕಾಗಿದೆ.


ನಮ್ಮ ದೇಶದ ಶಿಕ್ಷಣದ ಭಾಷೆ ಎರಡು ಶ್ರೇಣಿಯಲ್ಲಿದೆ. ಛನಾವು ನಮ್ಮ ಮಾತೃಭಾಷೆಯಲ್ಲಿ ಬೇಕಾದರೆ ಶಿಕ್ಷಣ ಪಡೆಯಬಹುದು ಅಥವಾ ಸಂಪೂರ್ಣವಾಗಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯಬಹುದು. ಹೀಗಾಗಿ ಸಾಮಾನ್ಯ ಜನರಿಗೆ ತಮ್ಮ ಮಾತೃಭಾಷೆಯನ್ನು ಕಲಿತು ಅದನ್ನು ಮರೆಯದೆ ಆಂಗ್ಲ ಭಾಷೆಯನ್ನು ಕಲಿತರೂ ದೇಶಾಂತರ, ಭಾಷೆಯ ತೊಂದರೆ ಸಂಭವಿಸುವುದಿಲ್ಲ. ಹೊರದೇಶ ಹೋಗುವವರಿಗೆ ಯಾವುದೇ ರೀತಿಯ ಸಂಭಾಷಣೆಯಲ್ಲಿ ತೊಂದರೆ ಇರುವುದಿಲ್ಲ. ಇದರಿಂದ ಭಾರತದ ಆರ್ಥಿಕತೆ ಒಂದು ಮಟ್ಟಕ್ಕೆ ಸುಧಾರಿಸುವುದು. ಎಲ್ಲರೂ ವೈಯಕ್ತಿಕವಾಗಿ ತಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದನ್ನು ಕಂಡುಕೊಂಡರೇ, ದೇಶದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಅಧಿಕ ಕೆಲಸಗಳು ರಚನೆಗೊಳ್ಳುತ್ತವೆ. 1970 ರಲ್ಲಿ ಇಡೀ ಜಗತ್ತು ನಮ್ಮ ದೇಶವನ್ನು ನೋಡಿ, ಬಡ ದೇಶ, ಜನರು ಉದ್ಯೋಗಹೀನಾ ಮತ್ತು ಕೆಳಮಟ್ಟದಲ್ಲಿ ಬಾಳುತ್ತಿದ್ದಾರೆ ಎಂದು ನಿರ್ವಹಿಸಿದ್ದರು. ಈಗ ಅಮೇರಿಕಾದಂತಹ ದೇಶಗಳಲ್ಲಿ ಭಾರತೀಯರನ್ನು ತಾಂತ್ರಿಕ ಮಾಂತ್ರಿಕರು ಎಂಬ ರೀತಿಯಲ್ಲಿ ನೋಡುತ್ತಾರೆ. ಈಗ ಅಮೆರಿಕದಲ್ಲಿ ಹಲವಾರು ಭಾರತೀಯರು ವಾಸವಾಗಿದ್ದಾರೆ ಸುಮಾರು 40 ಲಕ್ಷಕ್ಕೂ ಅಧಿಕ ಭಾರತೀಯರು ತಮ್ಮ ನೆಲೆಯನ್ನು ಕಂಡುಕೊಂಡಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಮುನ್ನಡೆಯನ್ನು ಹೀಗೆ ಕಾಣಬಹುದು.ಶಿಕ್ಷಣವು ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಮಹಿಳೆಯರನ್ನು ಹಿಂದುಳಿದ ವರ್ಗದವರನ್ನು ಮತ್ತು ಬಡವರನ್ನು ಈ ಶಿಕ್ಷಣದ ಓಟದಲ್ಲಿ ಎಳೆದು ಓಡಿಸುವ ಶ್ರಮ ಸರ್ಕಾರ ಪಡಬೇಕಾಗಿದೆ.


ನಮ್ಮ ದೇಶದಲ್ಲಿ ಎಲ್ಲಾ ಸಮಸ್ಯೆಗಳು ಬಂದದ್ದು ಹಾಗೂ ಈಗಲೂ ಉಳಿದಿರುವುದಕ್ಕೆ ಮೂಲಕಾರಣ ಜನಸಂಖ್ಯೆ. ಈ ತೊಂದರೆಯು ನಮ್ಮ ದೇಶಕ್ಕೆ ಸ್ವತಂತ್ರ್ಯ ಪಡೆಯುವ ಮುನ್ನ ಕಾಣಿಸಿಕೊಂಡಿದ್ದು ಸಮಸ್ಯೆಯು ಈಗ ಒಂದು ದೊಡ್ಡ ಬಂಡೆಯಾಗಿದೆ. ೧೯೪೫ರ ಬಳಿ ಎರಡನೇ ವಿಶ್ವಯುದ್ಧ ಮುಗಿಯುತ್ತಿದ್ದ ಸಂದರ್ಭದಲ್ಲಿ ನಮ್ಮ ದೇಶದಿಂದ ಹಲವಾರು ಸೈನಿಕರು ಬ್ರಿಟಿಷರ ಜೊತೆಯಲ್ಲಿ ಯುದ್ಧಕ್ಕೆ ಹೋದರು ಇದೇ ಸಂದರ್ಭದಲ್ಲಿ ಬಂಗಾಳ ಕ್ಷಾಮದಿಂದ ದೇಶ ತತ್ತರಿಸಿ ಹೋಗಿತ್ತು ಆಗ ಬ್ರಿಟನ್ ಪ್ರಧಾನಿಯಾದ ವಿನ್ಸ್ಟನ್ ಚರ್ಚಿಲ್ ಭಾರತಕ್ಕೆ ಈ ಸಂದರ್ಭದಲ್ಲಿ ತಾವು ಸಹಾಯ ಮಾಡಲಾಗುವುದಿಲ್ಲ ಏಕೆಂದರೆ ಭಾರತೀಯರು ಮೊಲಗಳ ರೀತಿ ತಂಗಿದ್ದರು ಎಂಬ ಕಾರಣ ಹೇಳಿದ್ದರು ಹೀಗಾಗಿ ಆ ಕ್ಷಾಮದಲ್ಲಿ ಸರಾಸರಿ 40 ಲಕ್ಷ ಭಾರತೀಯರು ದೈವಾಧೀನರಾದರು. ದೇಶಕ್ಕೆ ಸ್ವಾತಂತ್ರ್ಯ ಬಂದಮೇಲೆ ಈ ಜನಸಂಖ್ಯೆ ತೋಟದಿಂದ ಪಾರಾಗಲು ಕುಟುಂಬ ಯೋಜನೆಯು ಪ್ರಗತಿಗೆ ತಂದ ನಂತರ, ಒಂದು ಸ್ಥಿರತೆಗೆ ಬಂದಿದೆ ಎಂದು ಹೇಳಬಹುದು. ಈಗಾಗಲೇ ದೇಶದ ಜನಸಂಖ್ಯೆ 132 ಕೋಟಿಯಾಗಿದೆ ವಿಶ್ವಸಂಸ್ಥೆಯ ಪಕ್ಷೇಪಗಳ ಪ್ರಕಾರ 2050 ಒಳಗೆ ನಮ್ಮ ದೇಶದ ಜನಸಂಖ್ಯೆ ಚೀನಾವನ್ನು ಮೀರಿ 170 ಕೋಟಿಯ ಸಮೀಪ ಹೋಗಲಿದೆ ಎಂದು ಹೇಳಲಾಗಿದೆ. ಈ ಜನಸಂಖ್ಯೆ ಇಟ್ಟುಕೊಂಡು ಆರ್ಥಿಕವಾಗಿ ಮೂಡುವುದು ತುಂಬಾ ದೊಡ್ಡ ಸವಾಲು. ಇದರಿಂದ ಒಂದು ಪ್ರಯೋಜನವೇನೆಂದರೆ ದೇಶದ ಸರಾಸರಿ ವಯಸ್ಸು 27,‌ ಹಾಗಾಗಿ ದೇಶದ ಕಾರ್ಯ ಶಕ್ತಿ ಬೇರೆ ದೇಶಗಳಿಗೆ ಹೋಲಿಸಿದರೆ ಉನ್ನತ ಮಟ್ಟದಲ್ಲಿದೆ. ದೇಶದ ನಾಯಕರ ಚಿಂತೆ ಏನೆಂದರೆ ಜನಸಂಖ್ಯೆ ದೇಶಕ್ಕೆ ಬೆಂಬಲವಾಗ ಬೇಕೆಂದರೆ ಅವರಿಗೆ ಶಿಕ್ಷಣ, ಅದರಲ್ಲೂ ತಾಂತ್ರಿಕ ಶಿಕ್ಷಣ, ಉದ್ಯೋಗ, ಸ್ಥಿರವಾದ ಆದಾಯ ಬಹಳ ಅಗತ್ಯ.


ಇನ್ನೊಂದು ಸವಾಲೆಂದರೆ ನಿರುದ್ಯೋಗ ಹೆಚ್ಚಾದರೆ ಎಂತಹ ಉದ್ಯಮ ಕೈಗಾರಿಕೆ ಇದ್ದರೂ ಅಲ್ಲಿಗೆ ಸೃಜನಶೀಲ ಮತ್ತು ಪ್ರತಿಭಾವಂತ ಜನರ ಕೊರತೆ ಇದ್ದೇ ಇರುವುದು. ಆಗ ಅವರಲ್ಲಿ ಉದ್ಯಮಶೀಲತೆಯನ್ನು ಬೆಳೆಸಿ ಅದರ ಕಾರ್ಯ ಪ್ರಯೋಜನ ಬಗ್ಗೆ ಜನರಿಗೆ ಅರಿವು ಮೂಡಿಸಿ ಅವರನ್ನು ಮೇಲೆಕ್ಕೇರಿಸುವುದು. ಹೀಗೆ ಪ್ರೋತ್ಸಾಹಿಸಿದರೆ ದೇಶದ ಆರ್ಥಿಕತೆ ಮೇಲೇಳುತ್ತದೆ.


ಇನ್ನೊಂದು ಮೂಲ ಕಾರಣ ಬಡತನ. ಭಾರತದಲ್ಲಿ ೮.೪ ಕೋಟಿ ಮಂದಿ ವಿಶ್ವಸಂಸ್ಥೆಯ ಬಡತನ ರೇಖೆಯಾದ 142 ರೂಪಾಯಿ ಆದಾಯದ ಕೆಳಗೆ ಬದುಕುತ್ತಿದೆ. ಇದು ಶೇಕಡ ೮% ಭಾರತದ ಜನಸಂಖ್ಯೆಯಾಗಿದೆ. ಇದಲ್ಲದೆ ಇನ್ನೂ ಭಾರತದ ಬಡತನ ರೇಖೆಯಾದ ತಿಂಗಳಿಗೆ ೧೨೦೦ ರೂಪಾಯಿ ರೇಖೆಯಲ್ಲಿ ಹಲವಾರು ಕುಟುಂಬಗಳು ಬದುಕುತ್ತಿದೆ ಯ. ಹೀಗಾಗಿ ಭಾರತದಲ್ಲಿ ಈ ಬಡಜನರು, ನಗರಗಳಿಗೆ ಉದ್ಯೋಗಕ್ಕೆ ಬಂದು, ಉಳಿದುಕೊಳ್ಳಲು ಜಾಗ ಇಲ್ಲದೆ, ಹಲವಾರು ಕೊಳಗೇರಿಗಳು ಉಂಟಾಗುತ್ತವೆ. ಹೀಗಾಗಿ ಅವರಿಗೆ ಮೂಲ ಸೌಕರ್ಯ ನೀಡುವುದು ಸರ್ಕಾರಕ್ಕೆ ಬಹಳ ಕಠಿಣವಾಗಿದೆ ಇದರಿಂದ, ನೈರ್ಮಲ್ಯ ಹೀನ, ಬಡ ವಸತಿ, ದಿನಕ್ಕೆ ಮೂರು ಹೊತ್ತಿನ ಊಟವಿಲ್ಲದೆ, ಆಶ್ರಯವಿಲ್ಲದೆ ಬಾಳಾಗಿದೆ. ಇದರೊಂದಿಗೆ ಶಿಕ್ಷಣದ ಕೊರತೆ, ಆದಾಯದ ಕೊರತೆ ಇಂದ ಜನಸಂಖ್ಯೆ ಬಳಲುತ್ತಿದೆ. ನಮ್ಮ ದೇಶದ ಹಿಂದಿನ ವರ್ಷದ ಜಿಡಿಪಿಯಲ್ಲಿ ಶೇಕಡ ೧% ಶ್ರೀಮಂತರ ಆದಾಯ 73 % ಬಡಜನರ ಆದಾಯದಷ್ಟು ಇದೆ. ಇವರ ಮಧ್ಯೆ ಇರುವ ಮಧ್ಯಮವರ್ಗದ ಕುಟುಂಬಗಳ ಆದಾಯ ಕೆಲವೊಮ್ಮೆ ಹಿಗ್ಗು ತಗ್ಗು ಕಂಡು ಸ್ಥಿರವಾಗಿದೆ. ಈ ಸ್ಥೈರ್ಯತೆಯೇ ಭಾರತದ ಆರ್ಥಿಕತೆಯ ಬೆನ್ನೆಲುಬಾಗಿದೆ. ಹೀಗೆ ಮುಂದುವರೆಯುತ್ತಿದ್ದರೆ ಆದಾಯದ ಅಸಮಾನತೆ ತುಂಬಾ ಭೀಕರವಾಗುವುದು. ಬಡತನವನ್ನು ಹೋಗಲಾಡಿಸುವಲ್ಲಿ ಜನರು ಹಾಗೂ ಸರ್ಕಾರ ಕೈಜೋಡಿಸಿ, ಕಂದಾಯ, ತೆರಿಗೆ ಹಾಗೂ ಸೌಲಭಗಳ ಶುಲ್ಕವನ್ನು ಸಮವೇಗಕ್ಕೆ ತರಬೇಕಾಗಿದೆ. ಭಾರತದಲ್ಲಿ ಬಡತನ ಹೆಚ್ಚು ಕಂಡುಬರುವುದು ಗ್ರಾಮೀಣ ಭಾಗದಲ್ಲಿ. ನಮ್ಮಲ್ಲಿ, ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ವಲಸೆ ಬರುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದಕ್ಕೆ ಸರಿಯಾಗಿ ನಗರಗಳಲ್ಲಿ ಅತಿಯಾಗಿ ಹಾಗೂ ಉತ್ತಮ ಉದ್ಯೋಗಗಳು ಸೃಷ್ಟಿಯಾಗಬೇಕು‌. ಬಡ ಮಂದಿಯ ಆರೋಗ್ಯ ಸುಧಾರಣೆಗೆ ಸರ್ಕಾರ ಹೆಚ್ಚು ಜಾಗ್ರತಿ ವಹಿಸಬೇಕು. ಇದರಿಂದ ದೇಶದ ಸಾಮಾನ್ಯ ಜೀವಿತಾವಧಿ ಮೇಲೇರುವುದು. ಬಡವರಿಗೆ ಉತ್ತಮ ವಸತಿ, ನಿರ್ಮಲ ವ್ಯವಸ್ಥೆ ಕಲ್ಪಿಸುವಲ್ಲಿ ಸಫಲರಾದರೆ ಅದರೊಡನೆ ಜನರ ಆತ್ಮವಿಶ್ವಾಸ ಸಮತೋಲನ ಹೆಚ್ಚಾಗಿ ಅವರು ತಮ್ಮ ಮನಸ್ಸು ಬೇರೆ ಕಡೆಗೆ ವಾಲಿಸಿದೆ, ಭಾರತದ ಆರ್ಥಿಕ ಬೆಳವಣಿಗೆಗೆ ಕೈಜೋಡಿಸುತ್ತಾರೆ. ಇನ್ನು ಕೃಷಿಯನ್ನೇ ಅವಲಂಬಿಸಿ ಬದುಕುತ್ತಿರುವ ಹಲವು ಜನರಿಗೆ, ಆ ಪ್ರದೇಶಗಳಲ್ಲಿ ಕೈಗಾರಿಕಾ ವ್ಯವಸ್ಥೆಯನ್ನು ಸ್ಥಾಪಿಸಿ ಅವರ ಸಬಲೀಕರಣಕ್ಕೆ ದಾರಿ ಮಾಡಿಕೊಡಬೇಕು. ಹೀಗೆ ಆದಾಯದ ಕ್ಲಿಷ್ಟತೆಯನ್ನು ಪಾರು ಮಾಡಿದರೆ ಅಪರಾಧದ ಪ್ರಮಾಣವು ಕಡಿಮೆಯಾಗುವುದು.


ಈ ಪ್ರಮಾಣವು ಎಷ್ಟೇ ಕಡಿಮೆಯಾದರೂ ಭ್ರಷ್ಟಾಚಾರ ಇನ್ನೊಂದು ಸಾಮಾಜಿಕ ದುಷ್ಟ ಪರಿಣಾಮವಾಗಿದೆ. ಈ ಬೇಲಿಯನ್ನು ಕೆಡುವಲ್ಲಿ ಯಶಸ್ವಿಯಾಗಬೇಕು, ಇದರಿಂದ ಸುಸಂಬದ್ಧ ಸಮಾಜವನ್ನು ನಿರ್ಮಿಸುವಲ್ಲಿ ಉಪಯುಕ್ತವಾಗುವುದು. ಇನ್ನು ಹಲವಾರು ಶ್ರೀಮಂತ ಮಂದಿ ಹಾಗೂ ದೊಡ್ಡ ಸಂಸ್ಥೆಗಳು ಲೋಕೋಪಕಾರಿ, ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು. ಭಾರತದಲ್ಲಿ ಅಲ್ಲದೆ ಇಡೀ ವಿಶ್ವದಲ್ಲಿ ಮಾನವತಾವಾದಿಗಳು ಮುಂದೆ ಬಂದು ದೇಶದ ಅನೇಕ ತೊಂದರೆಗಳನ್ನು ಮುಂದೆ ತಂದು ಸುಧಾರಿಸಬೇಕು, ಹೀಗೆ ಮುಂತಾದ ಕಾರ್ಯಗಳಿಂದ ಭಾರತ ಇನ್ನೂ ಕೆಲವು ದೇಶಗಳಲ್ಲಿ ಇಡೀ ವಿಶ್ವವನ್ನು ತನ್ನತ್ತ ಸೆಳೆಯುವಲ್ಲಿ ಯಾವುದೇ ಅನುಮಾನವಿಲ್ಲ. ಭಾರತ ಒಂದು ಅಭಿವೃದ್ಧಿ ಹೊಂದಿದ ದೇಶ ಎಂದು ಹೇಳಬೇಕೆಂದರೆ ಒಬ್ಬ ಮೂರ್ಖನೂ ತಾನು ಪ್ರತ್ಯೇಕವಾಗಿ ಕೆಲಸದಿಂದ ದುಡಿದು ಆರಾಮಾಗಿ ಇರುವನು ಎಂದರ್ಥ.


ನೆನಪಿರಲಿ ಸುಧಾ ಮೂರ್ತಿಯವರು ಹೇಳಿದಂತೆ "ಸಾಧನೆ ಮಾಡಬೇಕು ಎನ್ನುವುದು ಕಡ್ಡಾಯವಲ್ಲ ಸರಳತೆಯಿಂದ ಒಳ್ಳೆಯದನ್ನು ಮಾಡುತ್ತಾ ಹೋದರೆ ಅದೇ ಒಂದು ದೊಡ್ಡ ಸಾಧನೆ."


146 views

Comments


bottom of page