ಭಾವೋತ್ಕರ್ಷ
- Prashant Ganapathi Bhat
- Oct 9, 2023
- 1 min read
ತಿಂಗಳು
ಬೆಳದಿಂಗಳು
ನೆನಪುಗಳೇ 'ತಂಗಳು'
ಆದರೂ ನೆನಪಾಗುವ ಆ ಕಂಗಳು.
ಈಗಲೂ ನಾ ನಂಬಲು,
ಅವಳನ್ನೇ ಆರಿಸುವ ಹಂಬಲು
ಅದಕ್ಕಾಗಿ ಎದುರಾಯಿತು ಕಗ್ಗಂಟು
ಬಿಡಿಸಲು ಶಕ್ತಿಯುಂಟು?
ಆದರೂ ಹಪಾಹಪಿಸುತಿದವಳ ನಂಟು
ಮಾಡುತ್ತಿರುವುದು ಉತ್ಪ್ರೇಕ್ಷೆಯಲ್ಲ,
ಕೇವಲ ಉತ್ಕರ್ಷವಷ್ಟೇ!
'ಯಥಾಗಚ್ಛತಿ ಸಾಗರಂ' ಎಂಬಂತೆ
ಅವಳ ನೆನಪುಗಳಲ್ನಾನು ಕಂಡಂತೆ
ಪ್ರತಿಯೊಂದು ನೋವಿನ ಹನಿಬಿಂದುವು,
ಸಾಗರದ ಸರ್ವಸ್ವ ಸೇರಲೇಬೇಕು
ಆದರೂ ಇಂಗಿತದ ಬಿಸಿಗೆ ಆವಿಯಾಗಿ
ಸಾಗರದ ಹನಿಗಳೂ ಮರುಸೋಸಲೇಬೇಕು
"ಭಾವನೆಯು ವಿಂಗಡನೆಯಾಗಲೆಬೇಕು"
Comments