ನೋಡಲು ಸುಂದರ , ಮುಟ್ಟಿ ನೋಡಿದರೆ ಅತೀ ಸುಂದರ.
ಒತ್ತಿದರೆ ಕಣ್ಣಿಗೆ ರಾಚುವ ಬೆಳಕಿನ ಚಿತ್ತಾರಗಳ ಹಂದರ .
ನೀನಾಗಿರುವೆ ಜಗದಲಿ ಸರ್ವ ಜನಾಂಗದ ನಾಡಿ ಮಿಡಿತ.
ನಿಲ್ಲಿಸಿದೆ ನೀನು ಅದೆಷ್ಟೋ ಹಕ್ಕಿಗಳ ಎದೆ ಬಡಿತ .
ಅಪರಾಧ ತನಿಖೆಗೆ ದಾರಿಯಾಗಿ, ದುಷ್ಟ ಕೂಟಕ್ಕೆ ವರವಾಗಿ,
ಸುಲಿಗೆ ಸಂಚಿಗೆ ನೆರವಾಗಿ ,ಹತ್ಯೆ ಪತ್ತೆಗೆ ಸಾಕ್ಷಿಯಾಗಿ ,
ನಾನಿಲ್ಲದ ನೀನು ನೀರಿಲ್ಲದ ಮೀನು ಎನ್ನುವ ಜಂಬವು ನಿನಗೆ .
ಕಾಲಚಕ್ರ ಉರುಳಿದಂತೆ ಕಾಲಗಳು ಬದಲಾದಂತೆ ಉಳಿಗಾಲವಿಲ್ಲ ಕೊನೆಗೆ.
ನೀನಿರುವೆ ಎಲ್ಲರ ಕೈಯಲ್ಲಿ,ನಿನ್ನ ಬಾಲವು ಹಲವರ ಕಿವಿಯಲ್ಲಿ .
ನೀನಿದ್ದರೆ ಕೆಲವರ ಕೈಯಲ್ಲಿ,ಬೇರಾವುದೂ ಬೇಡ ಈ ಜಗದಲಿ.
ಗಾಳಿಯಲಿ ಅಲೆಯಾಗಿ ತೇಲುವ ಮಾತುಗಳ ತರಂಗ.
ಕಾಣಿಸದು ಕೇಳಿಸದು ಅನ್ಯರಿಗೆ ನಿನ್ನ ಮನಸ್ಸಿನ ಅಂತರಂಗ
(ಅಂತ್ಯ ಪ್ರಾಸ ಪ್ರಯೋಗ)........
Comments