top of page

ಮಳೆ ಬಂತು!

Thanush K

ಗುಡುಗು ಮಿಂಚಿನಿಂದ ಬಂತು ಮಳೆ ಬರುವ ಸೂಚನೆ

ಎತ್ತ ನೋಡಿದರೂ ಬೀಳುತಿಹುದು ರಭಸದ ಮಳೆ

ಎಲ್ಲೆಡೆಯು ಜಿನುಗುತಿಹುದು ಹನಿಗಳ ಸುರಿಮಳೆ

ಬೇಸಿಗೆ ರಜೆಯಲ್ಲಿದ್ದ ಕೊಡೆಗಳೆಲ್ಲ ಬಂದವು ಹೊರಗಡೆ


ಮಳೆಯ ನೋಡಿ ಪಕ್ಷಿಗಳೆಲ್ಲ ಸೇರಿದವು ಗೂಡಿಗೆ

ಬಿಸಿ ಬೋಂಡ ತಿನ್ನಲು ಮನಸಾಯಿತು ಎಲ್ಲರಿಗೆ

ಬಟ್ಟೆ ಒಣಗಲಿಲ್ಲ ಎಂಬ ಯೋಚನೆ ಅಮ್ಮನಿಗೆ

ರಜೆ ಸಿಗಬಹುದೆಂದು ಯೋಚಿಸಿತು ಮಗುವು ಶಾಲೆಗೆ


ರೈತ ಕಾದು ಕುಳಿತಿಹನು ಮಳೆಯು ತನ್ನ ಬೆಳೆಗೆ.

ಕೆಮ್ಮು, ನೆಗಡಿ, ಶೀತವೆಲ್ಲ ಬಂದಿತು ಒಟ್ಟಿಗೆ

ಕಾಮನಬಿಲ್ಲು ನೋಡಿದ ಜನರ ಮೊಗದಲಿ ಮೂಡಿತು ನಗೆ

ಬೀದಿ ವ್ಯಾಪಾರಿಗಳಿಗೆಲ್ಲ ಶುರುವಾಯಿತು ತೊಂದರೆ


ಮನೆಯಲ್ಲಿ ಬೆಚ್ಚನೆ ಮಲಗುವ ಆಸೆ

ಮಳೆಯಲ್ಲಿಕುಣಿಯಲು ಯೋಚಿಸಿದಳು ಬಾಲೆ ಮನದಲೆ

ಜ್ವರ ಬರಬಹುದೆಂದು ಕುಳಿತಳು ಮನೆಯಲ್ಲಿ

ಸುಮ್ಮನೆ


Comments


  • Instagram

Follow us on Instagram

LitSoc DSI

bottom of page