top of page
Sinchana S Bhat

ರಹಸ್ಯ


ಹೀಗೊಂದು ಸುಳಿವು ಹಾಗೊಂದು ದಾರಿ,

ಮುಂದೆ ಹೋಗಲು ಕಾಣುವುದು ಕತ್ತಲೆಯು ಸಾರಿ,

ಎಲ್ಲೆಲ್ಲೂ ತುಂಬಿರುವ ನಿಗೂಢತೆಯ ಪಯಣಕ್ಕೆ ,

ನಾಂದಿ ಹಾಡುವ ಈ ಮೂಕ ಮೆದುಳಿನ ಸವಾರಿ!!!


ಕಲ್ಪನಾಲೋಕವಿದು ಕುರುಹು ಕಂಡುಹಿಡಿಯುತಿರಲು,

ಮನದ ಗೊಂದಲಗಳಲ್ಲಿ ಮುಳುಗೆದ್ದು ನಿಂತಿರಲು,

ಸಿಕ್ಕಿತೊಂದು ಜಾಡೆಂದು ತವಕದಲ್ಲಿ ನೋಡಲು,

ಬೇರೊಂದು ಕಥೆ ಹೇಳುವ ಈ ಮೂಕ ಮೆದುಳಿನ ಸವಾರಿ!!!


ಏನೆಂದು ಹೇಳುವುದು ಈ ಉದ್ಭವಗಳಿಗೆ,

ಹೇಗೆಂದು ಕೇಳುವುದು ಸತ್ಯುತ್ತರಗಳಿಗೆ,

ಬರುವ ಕಾರಣಗಳ ಬೆನ್ನತ್ತಿ ನುಗ್ಗಲು,

ರೂಪ ಬದಲಾಯಿಸುವ ಈ ಮೂಕ ಮೆದುಳಿನ ಸವಾರಿ!!

8 views

コメント


bottom of page