top of page
Laisiri

ವಾಸ್ತುಶಿಲ್ಪಿಗಳ ಸುವರ್ಣ ಯುಗ

ಹೊಯ್ಸಳ ಸಾಮ್ರಾಜ್ಯದ ವಾಸ್ತು ಶಿಲ್ಪಗಳು ಅತ್ಯಂತ ಪ್ರಸಿದ್ಧವಾಗಿದ್ದು ದ್ರಾವಿಡ ಮತ್ತು ನಾಗರ ಶೈಲಿಯ ಮಿಶ್ರಣವನ್ನು ಕಾಣಬಹುದಾಗಿದೆ .ಇದು ಆಕಾರ ಶಿಲ್ಪ, ಮುದ್ರಾ ಶಿಲ್ಪ, ಪ್ರಾಚೀನ ಶಿಲ್ಪ, ಸ್ಥಾಪತ್ಯ ಶಿಲ್ಪ ಮತ್ತು ದೇವಪೂಜಾ ಶಿಲ್ಪ ಎಂಬ ಪಂಚಕಲೆಗಳ ಸಮನ್ವಯವನ್ನು ಪ್ರದರ್ಶಿಸುತ್ತದೆ.


ತಲವಿನ್ಯಾಸವು ಸಾಮಾನ್ಯವಾಗಿ ಬಹುಕೋನಾಕೃತಿ ಅಥವಾ ನಕ್ಷತ್ರಾಕೃತಿಯಲ್ಲಿ ಇದ್ದು ಅನೇಕಾನೇಕ ಸೂಕ್ಷ್ಮ ಕೆತ್ತನೆಗಳಿರುವ ವಿಗ್ರಹಗಳು, ಶಿಲಾಬಾಲಿಕೆಯರು ಮತ್ತು ರಾಮಾಯಣ , ಮಹಾಭಾರತದಂತಹ ಪುರಾಣ ಕತೆಗಳನ್ನು ಕಣ್ಣಿಗೆ ಕಟ್ಟುವಂತೆ ಕಲ್ಲಿನಲ್ಲಿ ಕಡೆದಿರುವುದನ್ನು ಗಮನಿಸಬಹುದು . ಗಟ್ಟಿಮುಟ್ಟಾದ ಅಲಂಕಾರ ಮೂರ್ತಿಗಳು ಹೊಯ್ಸಳ ಶಿಲ್ಪಕಲೆಯ ಮೂಲಭೂತ ಲಕ್ಷಣಗಳು.ವಿಭಿನ್ನ ಆಕಾರಗಳು, ಅಲಂಕಾರ ವಿನ್ಯಾಸಗಳು, ಸಂಖ್ಯೆ ಕ್ರಮಗಳು, ಮತ್ತು ಸಾಂಕೇತಿಕ ಸೂಚನೆಗಳ ಬಳಕೆ ಹೊಯ್ಸಳ ಶಿಲ್ಪಕಲೆಯಲ್ಲಿ ಕಾಣಬಹುದು

13 views

Comments


bottom of page