ನೀನಿಲ್ಲಿಗೇಕೆ ಬಂದೆಯೆಂದು ನಾ ತಿಳಿದಿರುವೆ
ಜಗದ ಸೂಕ್ಷ್ಮಗಳನ್ನು ನಿನ್ನ ರೀತಿಯಲ್ಲಿ ಕಂಡು
ನಿಟನ್ನ ಮನದ ಕನ್ನಡಿಯನ್ನು ಇಕ್ಕಳದಲ್ಲಿ ಸಿಕ್ಕಿಸಿ
ಬುದ್ಧಿಯ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಿರುವ ನೀನು
ಈಗ ಇಲ್ಲೇಕೆ ನಾ ತಿಳಿದಿರುವೆ!!...
ಈ ಸಂದಿಗ್ಧ ಪಯಣದಲ್ಲಿ ನಡೆದು ನಡೆದು
ಕೊನೆಗೆ ಸಿಕ್ಕ ತಪ್ಪು ದಾರಿಯಲ್ಲಿ ಹಾದು
ತಡವಾಗಿ ಅದನ್ನರಿತ ನೀನು
ಈಗ ಇಲ್ಲೇಕೆ ಬಂದೆಯೆಂದು ನಾ ತಿಳಿದಿರುವೆ!!...
ತಲ್ಲಣವಾದ ನಿನ್ನ ಮನವನ್ನು
ಉಲ್ಬಣವಾಗಿ ಶಾಂತವಾಗಿಸಲು
ಬೆಂಬಲವಾಗಿ ನಿಂತಿರುವ ನಾನು ನೀನು
ಈಗ ಇಲ್ಲೇಕೆ ಬಂದೆಯೆಂದು ತಿಳಿದಿರುವೆ!!...
Commentaires