ನಾನೇನು ಸೂರ್ಯಕಾಂತಿಯೇನಲ್ಲ!
ನಿನ್ನ ಪ್ರಭೆಯ ಕಾಂತಿಯನ್ನೇ ಆರಿಸಲು
ನಮ್ಮಿಬ್ಬರ ಬಂಧನಕ್ಕೆ ಮುಕ್ತಿ ಕೊಟ್ಟು ನಾ ಹಾರಿಸಲು
ಇನ್ನೇನೂ ಉಳಿದಿಲ್ಲ ನಮ್ಮಿಬ್ಬರ ಬಂಧನವ ಸಾರಿಸಲು
ಹಣ್ಣಿನಲ್ಲಿನ ರಸದಂತೆ,
ಹೆಣ್ಣಿನಲ್ಲಿನ ಸೂಕ್ಷದಂತೆ,
ಕಬ್ಬಿನಲ್ಲಿನ ಸಿಹಿಯಂತೆ
ಆಗಸದ ಮೋಡದಂತೆ,
ಅರಮನೆಯ ಗಿನಿಯಂತೆ
ನನ್ನರಮನೆಯೊಳಗಿನ ಮನದರಸಿ ನೀನಾಗಿದ್ದೆ!
ನಾನಿಂದುಕೊಂಡಂತೆ ನಡೆಯಬೇಕೆಂಬ ಆಸೆಯು ಸಾಮಾನ್ಯ
ಆದರೆ ವಿಧಿಯಿಚ್ಛೆಯಲ್ಲಿ ಆಗದಿರುವುದು ಅದು ಸರ್ವೇಸಾಮಾನ್ಯ!
ಅದಕ್ಕಾಗಿ ನಿಲ್ಲಿಸು ನಿನ್ನ ಪರಪಂಚದಲ್ಲಿ ಹುದುಕುವುದನು
ಪ್ರಾರಂಭಿಸು ನಿನ್ನ ಪ್ರಪಂಚದಲ್ಲಿ ನಿನ್ನರಿಯುವ ಕರ್ಯವನು!
ಮುಳುಗಿರುವ ಸೂರ್ಯನು ಉದಯಿಸಲೇ ಬೇಕು
ಸ್ವಾತಿ ನಕ್ಷ್ರದಲ್ಲಿ ಬಿದ್ದಿರುವ ಮಳೆ ಹನಿಯು ಮುತ್ತಾಗಲೇಬೇಕು
ಲೋಕಟತ್ವ್ವದಂತೆ ಅಭಿರಮನಿಗೆ ಶುರ್ಪಣೆಯಲ್ಲ! ಸೀತೆ ಸಿಗಲೇ ಬೇಕು,
ಅಲ್ಲಿಯವರೆಗೆ ತಾಳ್ಮೆಯ ಉಳುಮೆ ಮಾಡೆಂದ ಬ್ರಹ್ಮಪುರಿಯ ಭಿಕ್ಷುಕ
Comments